Wednesday, 1 September 2021

ಮದ್ದಾನೆ ಗತಿ ಸಖಿ ಬಾರಮ್ಮಾ ಮುದ್ದು ಮೊಗದ ರಂಗನ ತಂದು ತೋರಮ್ಮಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಮದ್ದಾನೆ ಗತಿ ಸಖಿ ಬಾರಮ್ಮಾ|| ಮುದ್ದು ಮೊಗದ ರಂಗನ ತಂದು ತೋರಮ್ಮಾ 1 

ಇಂದು ಎನ್ನ ಚಿತ್ತ ಸ್ವಸ್ಥವಾಗದೇ| ಒಂದುಗಳಿಗಿ ಕ್ರಮಣವಾಗಿ ಹೋಗದೇ 2 

ಬಿಗಿದವೇನೆ ಮಾಯಿ ಫಣಿಗಳು| ವೇಗದಿಂದ ಬರುತಿದೇ ತಂಗಾಳಿಗಳು 3 

ಮಂದರಧರನು ಯಾಕೆ ಬಾರನೇ| ಚಂದ್ರ ಕಿರಣ ಝಳಕ ನಿಲ್ಲಲಾರೆನೇ 4 

ಮೊದಲೆನ್ನ ಬಿನ್ನಹವ ಹೋಗಿ ನೀನು ಹೇಳಮ್ಮಾ 5 

ಮೊದಲೆನ್ನ ಕೈಯ್ಯಾ ತಾ ಹಿಡುವರೇ| ತದನಂತರದಿ ತಪ್ಪ ನೋಡುವರೇ 6 

ಆರಿಸಿಬ್ಯಾಡೆಂದು ಹೇಳಿ ಕುಂದೆನ್ನಾ| ಕರೆತಾರೆ ಮಹಿಪತಿ ಸುತ ಜೀವನಾ 7

****


No comments:

Post a Comment