Thursday, 17 October 2019

ಸವಿದುಣ್ಣ ಬಾರಯ್ಯ ಸಾರಾಭೋಕ್ತಾ ಪವನಾಂತರ್ಗತ ankita vijaya vittala

ವಿಜಯದಾಸ
ಸವಿದುಣ್ಣ ಬಾರಯ್ಯ ಸಾರಾಭೋಕ್ತಾ
ಪವನಾಂತರ್ಗತ ಕಪಿಲಾತ್ಮ ನರಸಿಂಗಾ ಪ

ಉಪ್ಪು ಉಪ್ಪಿನಕಾಯಿ ಪತ್ರ ಶಾಖ ಸೂಪ
ಒಪ್ಪುವ ಸಂಡಿಗೆ ವ್ಯಂಜನಗಳು
ಇಪ್ಪವು ನಿರುಋತಿ ಪ್ರಾಣ ಮಿತ್ರ ಶೇಷ
ಸರ್ಪವೈರಿ ದಕ್ಷ ಲೋಕೇಶನಲ್ಲಿಗೆ 1

ಅನ್ನ ಮಂಡಿಗೆ ತೈಲ ಪಕ್ವಂಗಳು ಪರ
ಮಾನ್ನ ಭಕ್ಷ ತುಪ್ಪ ಹುಳಿ ಪದಾರ್ಥ
ಬೊಮ್ಮ ಜಯಂತರೈ ಸೂರ್ಯ
ಕನ್ಯ ಲಕುಮಿದೇವಿ ಪರ್ವತ ಸುತಿ ಇರೆ2

ಕ್ಷೀರ ನವನೀತಧಿಕಾರಣಾಮ್ಲ
ಚಾರು ಉದ್ದಿನ ಭಕ್ಷ ಕಟು ದ್ರವ್ಯ ಪಾ
ವಾರಿಜಾಸನ ರಾಣಿ ವಾಯು ಸೋಮ
ವೈರಿ ಧರ್ಮ ಸ್ವಾಯಂಭುವಂಗಳು ಅಲ್ಲಿ ಹಾಕಿರೆ 3

ಇಂಗು ಯಾಲಕ್ಕಿ ಸಾಸಿವೆಯಿಂದ ವೊಪ್ಪುತಾ
ಬಂಗಾರ ಪಾತ್ರಿಯೊಳಗೆ ತಂದಿಡೆ
ಸ್ವಾದೋದಕ ಇಡೆ
ಅಂಗಜಾ ದುರ್ಗಿಯ ಚಂದ್ರಮಸುತನಿರೆ 4

ವೀಳ್ಯವ ಕೈಕೊಳೊ ಗಂಗಾಜನಕ ಹರಿ
ಅಲ್ಲಲ್ಲಿಗೆ ನಿನ್ನ ರೂಪವುಂಟು
ಬಲ್ಲಿದಾ ವಿಜಯವಿಠ್ಠಲರೇಯ ಎನಗಿದೆ
ಸಲ್ಲೊದೆ ಸರಿ ಲೇಶವಾಪೇಕ್ಷದವನಲ್ಲ5
********

No comments:

Post a Comment