Thursday, 11 March 2021

ನಿನ್ನ ನಂಬಿ ನಷ್ಟವಾದೆನೋ ನರಹರಿ ankita tandepradyumna vittala

 ರಾಗ – ನೀಲಾಂಬರಿ : ತಾಳ -


ನಿನ್ನ ನಂಬಿ ನಷ್ಟವಾದೆನೋ ನರಹರಿ l

ಎನ್ನ ಕಷ್ಟ ನೋಡಬಾರದೆ ನರಹರಿ ll ಪ ll


ತರಳತನದಿ ದಿವ್ಯ ನಾಮವಾ ನರಹರೆ l

ನಿರತದಿಂದ ಸ್ಮರಿಸುತಿರುವೆನೊ ನರಹರೆ l

ಅರಿಯು ಬಂದು ಎರಡು ನಯನವೂ ನರಹರೆ l

ದ್ಯರಿಯದಂತೆ ಪರೆಯೆಗೈದೆವೆ ನರಹರೆ ll 1 ll


ನರರ ನಿಂತು ಪಾಡಿ ಪೊಗಳಲು ನರಹರೆ l

ಮರುಗಿ ಮನಸು ಕರುಣ ಮಾಳ್ಪರೊ 

ನರಹರೆ l

ಸರಿ ನೀ ಚತುರದಶಭುವನಕೆ ನರಹರೆ l

ಅರಸುಯೆನಿಸಿ ಕೊಳಲೆದೇನಯ್ಯ ನರಹರೆ ll 2 ll


ಇಂದೇನಾದದ್ದಾಗಿ ಹೋಗಲಿ ನರಹರೆ l

ಮುಂದೆ ಆದರು ಮುಕುತಿ ಪಾಲಿಸೊ ನರಹರೆ l

ತಂದೆ ಪ್ರದ್ಯುಮ್ನವಿಟ್ಟಠಲರೇಯ ನೀ ನರಹರೆ l

ಅಂದಮಾತಿಗೆ ಅಂಗೀಕರಿಸಯ್ಯಾ ನರಹರೆ ll 3 ll

***


No comments:

Post a Comment