Thursday, 11 March 2021

ಮಂಗಳಂ ಮಂಗಳಂ ಜಯಮಂಗಳ ಶ್ರೀ ಶ್ರೀನಿವಾಸನರ್ಧಾಂಗೀ ankita gurupranesha vittala

 ತಾಯಿ ಮಹಾಲಕ್ಷ್ಮೀದೇವಿಯರು ಕೊಲ್ಹಾಪುರಕ್ಕೆ ಬಂದ ಚಂದವನ್ನು ವಿವರಿಸುವ ಶ್ರೀ ಗುರುಪ್ರಾಣೇಶವಿಠಲದಾಸಾರ್ಯರ ರಚನೆಯ ಪದ


ಮಂಗಳಂ ಮಂಗಳಂ 

ಜಯಮಂಗಳ ಶ್ರೀ ಶ್ರೀನಿವಾಸನರ್ಧಾಂಗೀ ॥


ಭೃಗುಕಾಲಿಲೊದಿಯಾಲು ಅಗಲಿ ಬಂದಳು ಎಂಬೊ

ಬಗೆತೋರಿ ಮೋಹಿಸಿ ಇಗಡ ಜನರನಾ ॥


ಪರಮ ಧಾರ್ಮಿಕನಾದ ವರನಾರಾಯಣ ಋಷಿ-

ಗೊರವಿತ್ತು ನಡೆತಂದೆ ಮೆರೆವ ಸನ್ನತಿಗೆ ॥


ಕೋಲಾಸುರನ ಕೊಂದು ಪಾಲಿಸಿ ಪುರವನ್ನು

ಶೀಲೆ ಚಂದ್ರಾದೇವಿ ಆಳಿದ ಗೊಲಿದೇ ॥


ಆತ ತಕ್ಷಣದಲ್ಲಿ ಶ್ವೇತುರಾಯನ ಕೊಂದು

ಮಾತು ಲಾಲಿಸಿ ಅವನ ಪಾತಕ ಕಳದೇ ॥


ಗುರುಪ್ರಾಣೇಶಾವಿಠಲಾ ಇರುವ ನೀನಿದ್ದಲ್ಲೀ

ಎರವಿಲ್ಲೀಮಾತಿಗೆ ಸುರರ ಸಮ್ಮತವೂ ॥

***


No comments:

Post a Comment