by ತಂದೆ ವೆಂಕಟೇಶವಿಠಲ ದಾಸರು
ಆನಮಿಪೆ ಶ್ರೀ ಸತ್ಯಧ್ಯಾನಯತಿಗಳಿಗೆ | ಪ |
ಹೀನೈಕ್ಯಕಾನನ ತನೂನಪಾತನಿಗೆ | ಅ.ಪ |
ಆಸೇತು ಹಿಮಗಿರಿ ಪ್ರವಾಸ ಕೈಕೊಂಡಖಿಳ
ವ್ಯಾಸಸೂತ್ರಾದಿ ಪ್ರಸ್ಥಾನತ್ರಯದಲೀ
ದೇಶಿಕರ ವಿದ್ವದ್ಸಭಾಸಮ್ಮೇಳಾದೊಳನಿಲ
ಭಾಷ್ಯಾರ್ಥಗಳ ಪ್ರತಿಷ್ಟಾಪಿಸಿದನೆಂದೊ | ೧ |
ಸತ್ಯಜ್ಞಾನಾರ್ಣವ ಮಹತ್ತರೋಡುವ ಭಕ್ತ
ಹೃತ್ತಮಾಂತಕ ಭಾನು ಪ್ರತ್ಯರ್ಥಿಹ
ಮಿಥ್ಯವಿದ್ರಾವಣ ವಿಚಾರಸಾರಾದ್ಯಮಿತ
ತತ್ತ್ವಪ್ರಮೇಯ ಸರ್ವತ್ರ ಮೆರೆಸಿದನೆಂದು | ೨ |
ಜ್ಞಾನಾಯು ಭಕ್ತಿ ವೈರಾಗ್ಯಾನುಕೂಲದಲಿ
ದಾನಾನುಕಂಪ ವಿದ್ವತ್ಪ್ರಭೆಯಲಿ
ಜಾನಕೀಪತಿವಿಠಲ ಕೃಷ್ಣ ವ್ಯಾಸಾರ್ಚನೆ ವ್-
ಚಾನದೊಳಗಭಿನವಾನಂದ ಮುನಿಯೆಂದು | ೩ |
ಈ ವಿಧ ಮಹಾ ಮಹಿಮರೀಭುವಿಲಿ ಜನಿಸುವುದೇ
ಪಾವಮಾನಿಗರ ಸದ್ಭಾಗ್ಯವೆನುತ |
ಭಾವದೊಳು ಇವರಂಘ್ರಿರೇಣಿನವರವನಾಗಿ
ಸೇವಿಸಲು ದುರ್ಮೋಹ ವ್ಯಾವರ್ತವೆಂದು | ೪ |
ಭೌಮವಾದ ವಸಂತ ಚೈತಾದಿ ಅಷ್ಟಮಿಯ
ಯಾಮ್ಯಯಾಮದೆ ಚಿತ್ರಭಾನುವಿನಲಿ
ಭೀಮತಥೀತೀರ ತಂದೆ ವೆಂಕಟೇಶವಿಠಲನ
ಧಾಮವೈದಿದ ಕರ್ಮದೇವರಿವರೆಂದು | ೫ |
***
–
No comments:
Post a Comment