Wednesday 1 September 2021

ನೀನೇನು ಮಾಡಲಾಪೆನಾನು ಮುನ್ನ ಜನ್ಮ ಪಡೆದಲ್ಲದೆ ರಂಗ ankita neleyadikeshava

..

ನೀನೇನು ಮಾಡಲಾಪೆನಾನು ಮುನ್ನ ಜನ್ಮ ಪಡೆದಲ್ಲದೆ ರಂಗ ಪ


ನಾನಾ ಜನುಮದಿ ಬಹು ಯೋನಿ ಮುಖದಲಿ ಬಾಹಹೀನತ್ವವನು ನೀನು ಕಳೆಯಲಾಪೆಯನಾನು ನನ್ನದು ಎಂಬ ಅಹಂಕಾರವಿರೆ ನಿನ್ನಧ್ಯಾನಿಸಲು ಬುದ್ಧಿಯ ಕೊಡಲಾಪೆಯ 1


ಸಂಚಿತವಾಗಿರುವ ಪ್ರಾರಬ್ಧದೊಳಗೊಂದುಕಿಂಚಿತಾದರೂ ನೀನು ಕಳೆಯಲಾಪೆಯಪಂಚೇಂದ್ರಿಯಂಗಳು ದೆಸೆದೆಸೆಗೆ ಎಳೆದಾಗವಂಚನೆ ಇಲ್ಲದೆ ನೀನಡ್ಡ ಬರಲಾಪೆಯ2


ಸರಸಿಜೋದ್ಭವಗೆ ಬುದ್ಧಿಯ ಪೇಳಿ ಪಣೆಯೊಳುಬರೆದ ಬರೆಹವನು ನೀನು ತೊಡೆಯಲಾಪೆಯಪರಬ್ರಹ್ಮ ಕಾಗಿನೆಲೆಯಾದಿಕೇಶವ ನಿನ್ನಸ್ಮರಣೆಗೈಯಲು ಕಾಯದಿರಲಾಪೆಯ 3

***

 

No comments:

Post a Comment