ಶೇಷ ಪರ್ಯಂಕ ಶಯನ ವಿಷಯದಭಿಲಾಷೆ ಪರಿಹರಿಸಿ ಕಾಯೋ ಪ 
ರೆನದೆ ಮನೆಮನೆ ತಿರುಗಿದೆ ಅನಿಮಿಷೋತ್ತಂಸ ನಿನ್ನ ಪಾದವೊಂ ದಿನ ಭಜಿಸಿದವನಲ್ಲವೋ 1 
ಹರಿ ಗುರುಗಳನು ನಿಂದಿಪ ನೀಚರನು ಸರಿಸಿ ಅವರನು ಸ್ತುತಿಸಿದೆ ಪೊರೆಯಲೋಸುಗ ಉದರವ - ಜನರಿಂದ ಹರಿದಾಸನೆನಿಸಿಕೊಂಡೆ 2 
ಭಗವಂತ ನಿನ್ನ ಗುಣವ ವರ್ಣಿಸದೆ ಭಗವತಿಯರವಯವಗಳಾ ಸೊಗಸಿನಿಂದಲಿ ವರ್ಣಿಸಿ ಎನ್ನ ನಾ ಲಗೆ ಎರಡು ಮಾಡಿಕೊಂಡೆ 3 
ಸರ್ವಪ್ರಕಾರದಲ್ಲಿ ಹಗಲಿರುಳು ದುರ್ವಿಷಯಕೊಳಗಾದೆನೋ ಶರ್ವಾದಿ ವಂದ್ಯ ಚರಣಾ ನೀನೊಲಿ ದುರ್ವಿಯೊಳು ಸಲಹ ಬೇಕು 4 
ಉಪರಾಗ ಪರ್ವಗಳಲಿ ಸ್ನಾನ ಜಪ ತಪ ಅನುಷ್ಠಾನ ಜರಿದು ನೃಪರ ಮಂದಿರವ ಕಾಯ್ದು ಧನವ ತಂ ದುಪ ಜೀವಿಸಿದೆನೊ ಜೀಯಾ 5 
ವೇದ ಶಾಸ್ತ್ರಾರ್ಥಗಳನು ತಿಳಿದು ಸ ನ್ಮೋದ ಬಡದಲೆ ಕುಶಾಸ್ತ್ರ ಓದಿ ಪಂಡಿತನೆನಿಸಿದೆ ಕೀರ್ತಿ ಸಂ ಪಾದಿಸಿದೆ ವ್ಯರ್ಥ ಬಾಳಿದೇ 6 
ವೈರಾಗ್ಯ ಪುಟ್ಟಲಿಲ್ಲ ಘೋರ ಸಂ ಸಾರದೊಳು ಮಗ್ನನಾದೆ ಸೂರಿಗಳ ಮಧ್ಯದಲ್ಲಿ ಬುಧನಂತೆ ತೋರುವೆನು ನೋಳ್ಪ ಜನಕೆ 7 
ನಾ ಮಾಡ್ದ ಪಾಪರಾಶಿ ಎಣಿಸಲ್ಕೆ ತಾಮರಸಭವಗಸದಳ ಸ್ವಾಮಿ ಎನಗೇನು ಗತಿಯೋ ಭಾರವಾದೆ ಈ ಮಹಿಗೆ ಪ್ರತಿದಿನದಲೀ 8 
ಭೂತ ಸಂಬಂಧದಿಂದ ಬಹುವಿಧದ ಪಾತಕವೆ ಸಮನಿಸಿದವೋ ದಾತೃನೀ ಕಡೆ ಗೈದಿಸೋ ಭವದಿ ಜಗ ನ್ನಾಥ ವಿಠ್ಠಲ ಕೃಪಾಳೋ 9
***
pallavi
shESa pariyanka shayana viSayadabhilAshe biDisenna kAyO
caraNam 1
dhanavO danagaLa bhayasi nIcOcyarenanade mane mane tirugide
animishOttansa ninna pAda ondina bhajisidavanallavO
caraNam 2
guru hiriyaranu nindipa nIcadanu smarisi avaronnu nutiside
poreyalOsuga udarada janarinda navidAsa nenesikoNDE
caraNam 3
uparAga parvadali snAna japa tapa anuSTAna jaridu
nrapara mandirava kAidu dhana tandu upa jIvisidenO dEva
caraNam 4
bhagavanta ninna guNava bhajisadalr bhagavatiyarevayavagaLa
sogasi nindali varNisi enna nAlage baraDu mADi koNDe
caraNam 5
vEda shAstravanOdade kushAstra Odi paNDita neniside
mOda tIrthadali bhakuti mADadale vAdiside kIrtigAgi
caraNam 6
vairAgya puttalillA ghOra samsAradoLu magnanAde
sUrigaLa madhyadalli budhanante tOideny nOLpa janakE
caraNam 7
nA nADidaparAdhava eNisuvoDe tAmarasa bhavagasadaLa
svAmi ennagEnu gatiyO bArAde I mahige prati dinadali
caraNam 8
sarva prakAradali hagaliruLu durviSaya koLagAdeno
sharvAdi vandya olidu nInE urviyoLu saluha bEku
caraNam 9
bhUta smbandadinda bahu vidhada pAthakavaE samanishidavO
dAra nI kaDagaidisO guru jagannAtha viThala krapALO
***
 
No comments:
Post a Comment