Saturday, 31 July 2021

ನರಹರಿಯೇ ಪಾಲಿಸೋ ಪರಮ ಪುರುಷ ankita gururama vittala

 ರಾಗ – : ತಾಳ –


ನರಹರಿಯೇ ಪಾಲಿಸೋ ll ಪ ll


ಪರಮ ಪುರುಷ ಪ್ರಹ್ಲಾದ ವರದ ll ಅ ಪ ll


ದನುಜ ತನ್ನ ಮಗನನು ಬಾಧಿಸುತಿರೆ

ಕನಲಿ ಕಂಬದಿಂದವತರಿಸಿದ ll 1 ll


ನಖದಿ ಉದರವನು ಸೀಳುತಲಿ ಹಿರ-

ಣ್ಯಕನ ಕೊಂದು ಕರುಳನು ಧರಿಸಿದ ll 2 ll


ಗುರುರಾಮವಿಟ್ಠಲ ಕಾಮಿತವರಗಳ

ಶರಣಗೆ ನೀಡುತ ಆದರಿಸಿದ ll 3 ll

***


No comments:

Post a Comment