Saturday, 31 July 2021

ತಾರಮ್ಮಯ್ಯ ಕೃಷ್ಣನ ತಂದು ತೋರಂಮೈಯಾ ankita rangavittala

  ರಾಗ -  :  ತಾಳ - 


ತಾರಂಮೈಯ ಕೃಷ್ಣನ ತಂದು ತೋರಂಮೈಯಾ ll ಪ ll


ಪಾಣಿ ಪಾಣಿಯಿಂದ ಪಿಡಿದು ಶ್ರೇಣಿ ಶ್ರೇಣಿಯಾಗಿ ನಿಂದೂ l

ವೇಣುನಾದದಿಂದ ನಲಿದು ಕುಣಿಕುಣಿದಾಡಿದವನಾ ll 1 ll


ಪ್ರಾಣಿಗಳಾನೆಲ್ಲಾ ತನ್ನ ರಾಣಿಯಿಂದ ಸೃಷ್ಟಿಸಿದಾ l

ತ್ರಾಣವಂತನಾದ ಮುಖ್ಯ ಪ್ರಾಣ ವಂದ್ಯನ್ನ ಕರ ll 2 ll


ಚಂದ್ರ ಮೊದಲಾದ ದೇವೇಂದ್ರವಂದಿತ ಗುಣ l

ಸಾಂದ್ರನಾದಾ ರಾಮಾಚಂದ್ರನತಿ ವೇಗ ಕರ ll 3 ll


ಅಂದು ಅಮೃತಕ್ಕೆ ಬ್ಯಾಗಾ ಮಂದರಗಿರಿಯ ಪೊತ್ತ l

ಇಂದಿರೆ ರೂಪಾದಿ ಸುರವೃಂದಕ್ಕೆ ಸುಧೆಯಿತ್ತವನಾ ಕರ ll 4 ll


ಗಂಗಾಧರನ ಧನೂ ಭಂಗ ಮಾಡಿದಂಥ l

ಮಂಗಳಮೂರುತೀ ಶ್ರೀ ರಂಗವಿಟ್ಠಲನ್ನ ಕರ ll 5 ll

***



No comments:

Post a Comment