Tuesday, 13 April 2021

ತರುಳ ಪ್ರಹ್ಲಾದನ್ನ ದುರುಳ ಮಾತುಗಳಿಂದ ankita gurujagannatha vittala

ತರುಳ ಪ್ರಹ್ಲಾದನ್ನ ದುರುಳ ಮಾತುಗಳಿಂದ l

ಮರುಳು ದೈತ್ಯಾನು ಬಾಧಿಸೆ l

ವುರಳೀಸಿ ಅವನ ಹಿಂಗುರಳ ಪಿಡಿದೆಳೆದು l

ಉದರ ಕರುಳಾಗಳಾನೆ ಬಗಿದು ಬಾಲನ ಕಾಯಿದಿ ll 1 ll


ಸರಸಿಯೊಳಗೆ ಕರಿವರನನು l

ಪರಿಪರಿ ಬಾಧಿಗೈವುತಿರೆ l

ನರಹರಿ ಪೊರಿಯಂದು ಮೊರೆಯಿಡೆ ಅವನನು l

ಅರಸಿಗ್ಹೇಳದೆ ನೀ ಬಂದು ಮಕರಿಕೊಂದು ll 2 ll


ದುಷ್ಟ ಕೌರವ ಮಹ ಶಿಷ್ಠ ದ್ರೌಪದಿಯನ್ನು l

ಕಷ್ಟ ಬಡಿಸುತಿರಲಾಗ l

ಶ್ರಿಷ್ಠಿಕರ್ತನೆ ಶಿರಿಕೃಷ್ಣನೆ ಕಾಯೆನಲು

ಧಿಟ್ಟ ಗುರುಜಗನ್ನಾಥವಿಟ್ಠಲ ದಾತಾ ll 3 ll

***


No comments:

Post a Comment