Wednesday, 1 September 2021

ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಸಾಧನ ಬ್ಯಾರ್ಯದೆ ಸ್ವಹಿತ ಸಾಧನ ಬ್ಯಾರ್ಯದೆ ಪ  


ವಿದ್ಯಾ ವ್ಯುತ್ಪತ್ತಿ ಬೀರಿದರೇನು ರಿದ್ಧಿಸಿದ್ಧಿಯುದೋರಿದರೇನು 1 

ಜಪತಪ ಮೌನಾಶ್ರಯಿಸಿದರೇನು ಉಪವಾಸದಿ ಗೊಪೆ ಸೇರಿದರೇನು 2 

ದೇಶದ್ವೀಪಾಂತರ ತಿರುಗಿದರೇನು ವೇಷ ವೈರಾಗ್ಯವ ತೋರಿದರೇನು 3 

ಭಾನುಕೋಟಿತೇಜ ಒಲಿಯದೆ ತಾನು ಅನೇಕ ಸಾಧನಲ್ಯಾಗುವದೇನು 4 

ದೀನ ಮಹಿಪತಿಸ್ವಾಮಿಯಾಶ್ರಯಧೇನು ಮನವರ್ತದೆ ಕೈಯಗೊಡುವ ತಾನು 5

***


No comments:

Post a Comment