ಕಾಖಂಡಕಿ ಶ್ರೀ ಕೃಷ್ಣದಾಸರು
ತಿಳಿಯದೈ ಶ್ರೀ ಹರಿಯೆ ನಿನ್ನ ಮಹಿಮೆ ನಳಿನ ಸಂಭವ ಮುಖ್ಯನಿಗಮನಾಗ ಮಂಗಳಿಗೆ ಪ
ಒಂದು ಯಜ್ಞಕೆ ಪೋಗಿ ಇರುಳ್ಹಗಲು ಕಾಯ್ದಿ ಮ ತ್ತೊಂದು ಯಜ್ಞಕೆ ಕರ್ತನಾಗಿ ಮಾಡಿ ಒಂದು ಯಜ್ಞಕೇ ಪೋಗಿ ವಿಧ್ವಂಸ ಮಾಡಿ ಮ ತ್ತೊಂದು ಯಜ್ಞವ ಕೆಡಸಿದನ ಮಿತ್ರನಾದೇ1
ಒಬ್ಬರಸನನ ಕುಲವ ಪರಿಪರಿ ಸಂಹರಿಸಿ ಒಬ್ಬರಸನನ ನೆಲಿಗೆ ನಿಲಿಸಿದೈಯ್ಯಾ ಒಬ್ಬರಸನನ ಕರಗಸದಿ ಕೊಯಿದು ಪರೀಕ್ಷಿಸಿದೆ ಒಬ್ಬರಸನನ ಸಭೆಯೊಳಗೆ ಶಿರವ ತರಿದೇ 2
ಒಂದಾನೆ ಏರಿದನು ಪಾಯದಲ್ಲಿ ಮರ್ದಿಸಿದೆ ಒಂದಾನೆ ಏರುವನ ಮಗನ ಕಾಯಿದೇ ಒಂದಾನೆಯನುಕೊಂದು ರಜಕನಸುವನು ತೆಗೆದೆ ಒಂದಾನೆಗೊಲಿದೆ ಮಹಿಪತಿನಂದ ನೋಡಿಯಾ 3
***
No comments:
Post a Comment