..
ಹರಿದಾಸರ ಸಂಗಕೆ ಸರಿಯುಂಟೆ
ಗುರು ಕರುಣಕೆ ಇನ್ನು ಪಡಿಯುಂಟೆ ದೇವ ಪ
ದಾವಾನಲವ ತÀಪ್ಪಿಸಿ ಕಾಡಾನೆಯದÉೀವಗಂಗೆಗೆ ತಂದು ಹೊಗಿಸಿದಂತೆಆವರಿಸಿರುವ ಷಡ್ವರ್ಗ ತಪ್ಪಿಸಿ ಎನ್ನಶ್ರೀವರನ ಕರುಣಾರಸದಿ ತೋಯಿಸುವ 1
ಕಂದಿ ಬೇಸಗೆಯಲ್ಲಿ ನೊಂದ ಚಕೋರಕ್ಕೆಇಂದುಬಿಂಬದ ಮುಂದೆ ಹೊಗಿಸಿದಂತೆನೊಂದ ಹಮ್ಮಮತೆಯ ನೊಂದಿಸಿ ಎನ್ನ ಗೋ-ವಿಂದನ ಪಾದ ಸನ್ನಿಧಿಯ ಸೇರಿಸುವ 2
ಬಲೆಯ ಹಾರಿದ ಎಳೆ ಹುಲ್ಲೆಯ ಮರಿಗಳಿಗೆಒಲಮೆಯಿಂದಲಿ ತಾಯ ತೋರಿಸಿದಂತೆಬಲು ಇಂದ್ರಿಯಗಳ ಸೆರೆಯ ಬಿಡಿಸಿ ಎನ್ನನಳಿನನಾಭನ ಸನ್ನಿಧಿಯ ತೋರಿಸುವ 3
ಕರುಡರಿಗೆ ದಿವ್ಯಾಂಜನ ಹಚ್ಚಿ ಕಣ್ಣಿತ್ತುತೆರ ತೆರದಲಿ ಉಂಬ ನಿಧಿಯನಿತ್ತಂತೆಪರಮ ಮೂಢನಾದ ಎನಗೆ ಜ್ಞಾನವನಿತ್ತುನರಹರಿ ಪಾದ ಸಂದರುಶನವನ್ನೀವ 4
ತಡೆಯಿಲ್ಲದ ಪೂರಾ ತೊರೆಯಲ್ಲಿ ಪೋಪನಪಿಡಿದೆತ್ತಿ ತಡಿಯನು ಸೇರಿಸಿದಂತೆಕಡೆಗೆಟ್ಟು ಭವಾಬ್ಧಿ ನಡುವೆ ಸಿಕ್ಕಿದ ಎನ್ನಪಿಡಿದು ಶ್ರೀಕೃಷ್ಣನಂಘ್ರಿಗಳ ಸೇರಿಸುವ 5
***
No comments:
Post a Comment