varadendra teertha rayara mutt yati 1785 stutih
ರಾಗ : ಸೌರಾಷ್ಟ್ರ ತಾಳ : ಆದಿ
ಚಿತ್ರವಾಗಿದೆ ನೋಡು ನಮಗೆ ।
ಸತ್ಯ ಗುಣಸಾಂದ್ರ ವರದೇಂದ್ರ ।
ಯತಿಗಳ ಮಹಿಮೆ ।। ಪಲ್ಲವಿ ।।
ವಿದ್ವದ್ವಿಶೇಷಕ್ಕೆ ಶೇಷ
ತಲೆದೂಗಿದನು ।
ಸದ್ವ್ರಯದ ದಾನಕೆ
ಕರ್ಣನ ಮೀರಿದಾ ।
ಬುದ್ಧಿಯಲಿ ಧೀಕ್ಷಣ
ಮನ್ನಿಸಿದಾ ಸದಾಚಾರ ।
ಪದ್ಧತಿಯ ನೋಡಿ ಬ್ರಹ್ಮನು
ಸಮ್ಮತಿಸಿದ ಬಲು ।। ಚರಣ ।।
ಸರ್ವಜ್ಞತಾ ಗುಣಕೆ ಶರ್ವ
ಬಲು ಶ್ಲಾಘಿಸಿದ ।
ಊರ್ವಿ ಪೊಗಳಿದಳಿವರ
ಕ್ಷಮೆ ಧರ್ಮಕೇ ।
ಸರ್ವದಾ ಧೈರ್ಯ
ಗಾಂಭೀರ್ಯಕೆ ಮಹಾ । ಹಿಮ ।
ಪರ್ವತಾಭ್ಧಿಗಳು ಸೈ
ಸೈಯೆಂದವರಿಕೊ ।। ಚರಣ ।।
ವರದ ಗೋಪಾಲವಿಠಲನ
ವಲಿಮಿಂದ । ಶ್ರೀ ।
ವರದೇಂದ್ರ ಯತಿ
ವರಪ್ರದ ಮಹಿಮೆಗೆ ।
ಸುರಧೇನು ಕಲ್ಪತರು
ವರ ಚಿಂತಾರತುನಗಳು ।
ಸ್ವರ್ಗ ಲೋಕದಲ್ಲಿ
ಬೆರಗಾದವಿದಕೊ ।। ಚರಣ ।।
****
No comments:
Post a Comment