Wednesday, 1 September 2021

ಜಗದೊಳಗಿದ್ದವ ಧೀರಾ ಭವ ದೂರ ದೂರ ದೂರ ದೂರ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಜಗದೊಳಗಿದ್ದವ ಧೀರಾ | ಭವ ದೂರ ದೂರ ದೂರ ದೂರ ಪ 


ಮೆರೆವ ಪ್ರಪಂಚ ಪರಮಾರ್ಥ ದೂರಾ | ಎರಡು ಸಮಲಿದ್ದವ ಧೀರ ಧೀರ ಧೀರ ಧೀರ 1 

ಸಕಲವೆಲ್ಲವು ಹರಿಯಚ್ಚರಾ | ಯುಕುತಿಮನ ಬಲಿದವ ಧೀರ ಧೀರ ಧೀರ ಧೀರ 2 

ಜರಿಯ ಸಂಸಾರವ ವಿರಕ್ತಿಯ ದೋರಾ | ನೀರು ಕಮಲದಂತೆ ಇರುವಾ ಧೀರ ಧೀರ ಧೀರ ಧೀರ 3 

ಗುರುಮಹಿಪತಿ ಸ್ವಾಮಿ ಚರಣ ತತ್ಪರಾ | ಗಿರುವ ಸಾವಧಾನದಿಂದ ಧೀರ ಧೀರ ಧೀರ ಧೀರ 4

****


No comments:

Post a Comment