Monday 2 August 2021

ಕಳೆಯ ಬ್ಯಾಡ ಮನವೇ ದಿನಾ ಕಳೆಯ ಬ್ಯಾಡ ankita sirigovinda vittala

ಕಳೆಯ ಬ್ಯಾಡ ಮನವೇ ದಿನಾ ಕಳೆಯ ಬ್ಯಾಡ ಪ


ಹನುಮ ವಿನುತ ಪದವನುಜ ಮರೆತು ದಿನ ಅ.ಪ


ಆರನು ನಂಬಿದರಾರು ಕಾಯುವರು

ಧೀರ ದೇವಕಿಯ ಸುಕುಮಾರ ನುಳಿದು ದಿನ 1


ಯತಿಕುಲಪತಿ ಸುಖತೀರ್ಥರ ಮತ ರತುನದ

ಕ್ಷಿತಿಗೆ ಪಾರ್ಥಸಾರಥಿಯ ನುಳಿದು 2


ನಂದದ ಶಿರಿಗೋವಿಂದ ವಿಠಲ

ರಾಘವೇಂದ್ರ ವಿನುತ ದ್ವಂದ್ವನುಳಿದು ದಿನ 3

****

 

No comments:

Post a Comment