Monday, 2 August 2021

ಜಯತೀರ್ಥ ಗುರು ಹೃದ್ಗುಹಾಂತರ ವಾಸ ankita krishnavittala jayateertha stutih

ಜಯತೀರ್ಥ ಗುರು ಹೃದ್ಗುಹಾಂತರ ವಾಸ

ವಾಯ್ವಂತರ್ಗತ ಶ್ರೀ ಕೃಷ್ಣಯ್ಯ ಜೀಯಾ ಪ


ಕಾಯೈಯ ನಿನ್ನವ ನಿವನೆಂದು ಅನುದಿನದಿ

ಕಾಯ ಮನ ವಚನದಲಿ ನಿನ್ನ ನೆನವಿರಲಿ

ಜೀಯಾ ಶ್ರೀ ವಿಜಯರಾಯರ ಸೇವೆ

ಕಾರ್ಯಗಳಿಗಭಯವ ನಿಡೈಯಾ ಜೀಯಾ 1


ಲೌಕಿಕದಲ್ಲಿಹನೆಂದು ನಿರಾಕರಿಸದೇಲೆ

ನಿನ್ನ ಏಕಾಂತ ಭಕುತಿಯನಿತ್ತು ಸಲಹೋ

ಶ್ರೀ ಕಳತ್ರನೆ ಇವನ ವ್ಯಾಕುಲಗಳ ಹರಿಸಿ

ಕೃಪಾಕಟಾಕ್ಷದಿ ನೋಡಿ ಕಾಯಬೇಕೈಯಾ 2


ಭಕ್ತವತ್ಸಲ ನಿನ್ನ ಭಕ್ತನಿವನೆಂದೆನಿಸು

ಭಕ್ತಿಬಲe್ಞÁನ ಸಾಧನವನಿತ್ತು

ಶಕ್ತನೆನಿಸಿಹಪರದಿ ಭಕ್ತಿನಿನ್ನೊಳು ಇರಲಿ

ಮುಕ್ತರೊಡೆಯ ಕೃಷ್ಣವಿಠಲ ಶ್ರೀ ವೆಂಕಟೇಶ 3

****


No comments:

Post a Comment