Wednesday, 1 September 2021

ದೊರಕುವುದೇ ಪರಮಾರ್ಥ ಜರಿದು ಆಶ್ರಮ ಧರ್ಮಾ ವೇಷ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ದೊರಕುವುದೇ ಪರಮಾರ್ಥ ಪ 


ಜರಿದು ಆಶ್ರಮ ಧರ್ಮಾ ವೇಷ ವಿರಕ್ತಿಯಿಂದಾ | ಚರಿಸುತ ಬಳಲುವರೇ ವ್ಯರ್ಥ 1 

ಕ್ರಮದ ಹಾದಿಯ ಬಿಟ್ಟು ಅಡವಿ ಬೀಳಲು ಎಲ್ಲ | ಕಮರಿಯಲ್ಲದೇ ಗ್ರಾಮವಾರ್ತಾ 2 

ಕಣ್ಣಿನೊಳಂಜನಿಲ್ಲದೇ ಹಲವು ಸಾಧನದಿಂದಾ | ದಣ್ಣನೇ ದಣಿವರೇ ದ್ರವ್ಯಕುರ್ತಾ 3 

ಕರಗದೆ ವಾಸನೆ ತಪಹೀನ ಅಂತರ್ಗತ | ಜ್ವರವಿರಲಾರೋಗ್ಯದ ಸ್ನಾನಾರ್ಥ 4 

ತಂದೆ ಮಹಿಪತಿ ಸುತ ಪ್ರಭು ಒಲುಮೆಯಾ | ಛಂದದಿ ಪದ ಕೊಂಡವನೇ ಧೂರ್ತಾ 5

****


No comments:

Post a Comment