ಜಗನ್ನಾಥದಾಸರು
ರಾಮಾ ರಘುಕುಲರಾಮಾ ll ಪ ll
ಸುರ ಸಾರ್ವಭೌಮ ಪಾಹಿ ಗುಣಧಾಮಾ ll ಅ ಪ ll
ವೀಂದ್ರ ವಾಹನ ಫಣೀಂದ್ರಶಯನ ವರ
ದೇನ್ದ್ರನುತ ರಾಮಚಂದ್ರಾ ll 1 ll
ಚಂಡಬಾಣ ಕೋದಂಡಾ ವಿಧೃತ ದೋ
ರ್ದಂಡಾ ಲೋಕೈಕ ಶುಂಡಾ ll 2 ll
ಗೋಪ್ತಾ ಮೂಜಗದ್ವ್ಯಾಪ್ತಾ ದೋಷನಿ
ರ್ಲಿಪ್ತಾ ವಿಬುಧಜನರಾಪ್ತಾ ll 3 ll
ಘನ್ನಾ ಸೌಪರಿಛಿನ್ನ ಕಾಲಾತಿ
ಭಿನ್ನ ಜಗದ ಮೋಹನ್ನಾ ll 4 ll
ಅಂಬಾವಲ್ಲಭ ಬಿಂಬಾಸುರ ಮುನಿಕ
ದಂಬಾ ಸೇವೆ ಕೈಕೊಂಬಾ ll 5 ll
ಗಣ್ಯಾಗಣ್ಯನೆ ಶರಣ್ಯ ಸಲಹೋ ನಿ
ರ್ವೀಣ್ಯ ಸುರವರವರೇಣ್ಯ ll 6 ll
ಜ್ಞಾನಾನಂದಾದಿ ನಾನಾ ಗುಣಪೂರ್ಣ
ಶ್ರೀ ನಾರಾಯಣ ಸಮಾನಾ ll 7 ll
ಕಪಿಲಾ ಭಕ್ತರಿಗೆ ಸುಫಲಾದಾಯಕ
ಚಪಲಚಿತ್ತರಿಗೆ ಉಪಲಾ ll 8 ll
ಸೀತಾಪತೆ ಜಗನ್ನಾಥವಿಟ್ಠಲ
ಖ್ಯಾತಾ ಭವವನನಿಧಿ ಪೋತಾ ll 9 ll
***
ರಾಮಾ ರಘುಕುಲರಾಮ ಪ
ಸುರ ಸಾರ್ವಭೌಮ ಪಾಹಿ ಗುಣಧಾಮಾ ಅ.ಪ.
ವಾಹನ ಫಣೀಂದ್ರಶಯನ ವರ
ದೇಂದ್ರನುತ ರಾಮಚಂದ್ರಾ 1
ಚಂಡಬಾಣ ಕೋದಂಡಾ ವಿಧೃತ ದೋ
ರ್ದಂಡಾ ಲೋಕೈಕ ಶುಂಡಾ 2
ಗೋಪ್ತಾ ಮೂಜಗದ್ವ್ಯಾಪ್ತಾ ದೋಷನಿ
ರ್ಲಿಪ್ತಾ ವಿಬುಧಜನರಾಪ್ತಾ 3
ಘನ್ನಾ ಸೌಪರಿಛಿನ್ನ ಕಾಲಾತಿ
ಭಿನ್ನ ಜಗದ ಮೋಹನ್ನಾ 4
ಅಂಬಾವಲ್ಲಭ ಬಿಂಬಾಸುರ ಮುನಿಕ
ದಂಬಾ ಸೇವೆ ಕೈಕೊಂಬಾ 5
ಗಣ್ಯಾಗಣ್ಯನೆ ಶರಣ್ಯ ಸಲಹೋ ನಿ
ರ್ವೀಣ್ಣ ಸುರವರವರೇಣ್ಯ 6
e್ಞÁನಾನಂದಾದಿ ನಾನಾ ಗುಣಪೂರ್ಣ
ಶ್ರೀ ನಾರಾಯಣ ಸಮಾನಾ 7
ಕಪಿಲಾ ಭಕ್ತರಿಗೆ ಸುಫಲಾದಾಯಕ
ಚಪಲಚಿತ್ತರಿಗೆ ಉಪಲಾ 8
ಸೀತಾಪತೆ ಜಗನ್ನಾಥ ವಿಠಲ
ಖ್ಯಾತಾ ಭವವನನಿಧಿ ಪೋತಾ 9
*******
No comments:
Post a Comment