Saturday 14 December 2019

ವಾಗ್ದೇವಿ ವಾಗ್ದೇವಿ ಹಿತದಿ ankita jagannatha vittala

ಜಗನ್ನಾಥದಾಸರು
ವಾಗ್ದೇವಿ ಪ

ವಾಗ್ದೇವಿ ಅ.ಪ.

ಹಿತದಿ ಸನ್ಮತಿಯ ಶ್ರೀಮತಿದೇವಿ ನೀಡೆ
ವ್ರತತಿಜನೇತ್ರೆ ಭಾರತಿ ನೀ ದಯಮಾಡೆ 1

ಸುಮುಖೀ ತ್ವಚ್ಚರಣಾಬ್ಜದ್ರುಮಛಾಯಾಶ್ರಿತರ
ಸುಮತಿಗಳೊಳಗಿಟ್ಟು ಮಮತೆಯಿಂ ಸಲಹೆ 2

ಜಗನ್ನಾಥವಿಠಲನಂಘ್ರಿಗಳ ಸೇವೆಯೊಳು
ಸುಗುಣೆ ಸನ್ಮತಿಗೊಟ್ಟು ಬೇಗೆನ್ನ ಸಲಹೆ 3
********

No comments:

Post a Comment