Wednesday, 13 November 2019

ಪಾಲಿಸಂಬುಧಿಶಾಯಿ ankita prasannavenkata

by ಪ್ರಸನ್ನವೆಂಕಟದಾಸರು

ಪಾಲಿಸಂಬುಧಿಶಾಯಿ ವ್ಯಾಳಕಶಿಪುಶಾಯಿ

ಪಾಲಿಸು ವಾರಿಧಿಕೂಲದಿ ದರ್ಭಶಾಯಿ ಮೂಲ ವಟಪತ್ರಶಾಯಿ ll ಪ ll


ವೇದೋದ್ಧಾರ ದಯಾಳು ಭೂಧರಧರ ದಯಾಳು

ಮೇದಿನಿ ಅಂತರ್ಮಾಲಾದಂಡ ಶುಭ ಕುಠಾರಧಾರಿಯೆ ದಯಾಳು

ಕೋದಂಡಧರ ದಯಾಳು ಸ್ವಾದ ವೇಣುಧರ ದಯಾಳು ಸ

ಮಾಧಿ ವ್ರತಧರ ಧರ್ಮಾಧರ ವಿಶ್ವಾಧರ ಮಾಧವ ನಿತ್ಯದಯಾಳು ll 1 ll


ಪಂಚಜನನ ವೈರಿ ವಂಚಕಾಸುರ ವೈರಿ

ಕಾಂಚನನೇತ್ರಕ ಯದುಪತಿ ಬಲಿಮದಚಂಚಲ ಖಳವೈರಿ 

ಪಂಚದ್ವಯಾಸ್ಯನ ವೈರಿ ಪಂಚಪಾರ್ಥಾರಿತ ವೈರಿ

ಪಂಚಬಾಣಾರಿವೈರಿ ಪಂಚಪಾತಕವೈರಿ ಸಂಚಿತಘಕೆ ವೈರಿ ll 2 ll


ಸರನಿಕೇತನಿವಾಸ ಗಿರಿತಳ ಸನ್ನಿವಾಸ ವರಸ್ವಾಮಿಪುಷ್ಕರ

ಸಿರಿ ಅಹೋಬಲ ನೃಪಾಗರ ತ್ರಿಜಗನಿವಾಸ 

ಸರಯೂತೀರ ನಿವಾಸ ಶರಧಿಮಂದಿರವಾಸ

ಸುರವಿರೋಧಿಸದನ ಪರಮ ಶಂಬಲವಾಸ ಪರಸನ್ನವೆಂಕಟವಾಸ ll 3 ll

***


ಪಾಲಿಸಂಬುಧಿಶಾಯಿ ವ್ಯಾಳಕಶಿಪುಶಾಯಿಪಾಲಿಸು ವಾರಿಧಿüಕೂಲದಿ ದರ್ಭಶಾಯಿ ಮೂಲ ವಟಪತ್ರಶಾಯಿ ಪ.

ವೇದೋದ್ಧಾರ ದಯಾಳು ಭೂಧರಧರ ದಯಾಳುಮೇದಿನಿಅಂತರ್ಮಾಲಾದಂಡಶುಭಕುಠಾರಧಾರಿಯೆ ದಯಾಳುಕೋದಂಡಧರ ದಯಾಳುಸ್ವಾದವೇಣುಧರ ದಯಾಳು ಸಮಾಧಿ ವ್ರತಧರ ಧರ್ಮಾಧರ ವಿಶ್ವಾಧರಮಾಧವನಿತ್ಯದÀಯಾಳು1

ಪಂಚಜನನವೈರಿವಂಚಕಾಸುರವೈರಿಕಾಂಚನನೇತ್ರಕ ಯದುಪತಿ ಬಲಿಮದಚಂಚಲ ಖಳವೈರಿಪಂಚದ್ವಯಾಸ್ಯನವೈರಿಪಂಚಪಾರ್ಥಾರಿತವೈರಿಪಂಚಬಾಣಾರಿವೈರಿ ಪಂಚಪಾತಕವೈರಿ ಸಂಚಿತಘಕೆವೈರಿ2

ಸರನಿಕೇತನಿವಾಸ ಗಿರಿತಳ ಸನ್ನಿವಾಸ ವರಸ್ವಾಮಿಪುಷ್ಕರಸಿರಿಅಹೋಬಲ ನೃಪಾಗರ ತ್ರಿಜಗನಿವಾಸಸರಯೂತೀರ ನಿವಾಸ ಶರಧಿಮಂದಿರವಾಸಸುರವಿರೋಧಿಸದನಪರಮಶಂಬಲವಾಸ ಪರಸನ್ನವೆಂಕಟವಾಸ3
*******

No comments:

Post a Comment