Wednesday, 1 September 2021

ಅಲ್ಲೇ ನಿಲ್ಲೇನು ಮತ್ತಿಲ್ಲೇನು ಅಲ್ಲೇ ನಿಲ್ಲೇನು ಹರಿರೂಪ ankita mahipati


ಅಲ್ಲೇನಿಲ್ಲೇನು ಮತ್ತಿಲ್ಲೇನು ಪ 

ಅಲ್ಲೇ ನಿಲ್ಲೇನು | ಹರಿರೂಪಗಾಣದೇ ಡಂಭದಿ ತಿರುಗಿದ | ಅಲ್ಲೇ ನಿಲ್ಲೇನು 1 

ಕರ್ಮಧರ್ಮವ ಮಾಡಿ ಸ್ವರ್ಗವ ಪಡೆದನು | ಅಲ್ಲೇ ನಿಲ್ಲೇನು| ಮರ್ಮವ ಗಾಣದ ವಿಷಯದ ಸಂಭ್ರಮ | ಅಲ್ಲೇ ನಿಲ್ಲೇನು 2

 ಅಲ್ಲೇನಿಲ್ಲೇನು | ವನಿತೆ ಮಕ್ಕಳ ಬಿಟ್ಟು ಶಿಷ್ಯರ ನೆರಹಿದ | ಅಲ್ಲೇ ನಿಲ್ಲೇನು 3 

ಎಲ್ಲ ಶಾಸ್ತ್ರವನೋದಿ ಪ್ರಾಕೃತಹಳಿದನು | ಅಲ್ಲೇ ನಿಲ್ಲೇನು | ಬಲ್ಲವ ನಾನೆಂಬ ಗರ್ವವು ಸೇರಿತು | ಅಲ್ಲೇ ನಿಲ್ಲೇನು 4 

ಅಲ್ಲೇ ನಿಲ್ಲೇನು | ಮನದಲೆಚ್ಚರವಿಲ್ಲ ಕವಾಟಹೊಕ್ಕನು ಅಲ್ಲೇ ನಿಲ್ಲೇನು 5 

ಮಹಿಪತಿ ನಂದನ ಸಾರಿದ ಸ್ವಹಿತ ಅಲ್ಲೇ ನಿಲ್ಲೇನು | ಶ್ರೀಹರಿ ನಾಮದ ನಂಬುಗೆ ಇರಬೇಕು | ಅಲ್ಲೇ ನಿಲ್ಲೇನು 6

***


No comments:

Post a Comment