Wednesday, 1 September 2021

ಎನ್ನೊಳು ನ್ಯೂನವಾರಿಸದೇ ಸಲಹಯ್ಯಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಎನ್ನೊಳು ನ್ಯೂನವಾರಿಸದೇ ಸಲಹಯ್ಯಾ ಪ 


ಕಾಮಕ್ರೋಧ ಸಂಗವ ಮಾಡೀ | ತಾಮಸ ಲೋಭದಿ ಮೋಹವ ಕೂಡಿ | ತಾಮದ ಮತ್ಸರದಲಿ ಬೆರೆದಾಡೀ | ನೇಮದಿಗೆಟ್ಟೆ ವೃಥಾಯಕ1 

ವಿಷಯೇಂದ್ರಿಯ ಸುಖ ವಿಷಯೆಂದರಿಯದೆ | ವಿಷಯದಿ ನಿಸಿದಿನಗಳೆದೆನು ಹರಿಯೇ | ಕುಶಲದ ಕರ್ಮದ ದಾರಿಯ ವಿಡಿಯೆ | ಘಸಣಿಗೆ ಬಿದ್ದೆನು ಭವದಿಂದ2 

ತಂದೆ ಮಹಿಪತಿ ನಂದನ ಪ್ರಾಣಾ | ಮುದದಿ ಕೈಯನು ಪಿಡಿಯಲೋ ಪೂರ್ಣಾ | ಛಂದದಿ ತೋರಿಸಿ ನಾಮದ ಖೂನಾ | ಇಂದಿಗೆ ಧನ್ಯನ ಮಾಡು3

***


No comments:

Post a Comment