Wednesday, 1 September 2021

ನಿನ್ನವ ನಾನೆಂದು ಸಿರಿನಲ್ಲಾ ರಕ್ಷಿಸೋ ಎನ್ನವಗುಣಗಳ ಎಣಿಸದೆ ದಯದಿಂದ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ನಿನ್ನವ ನಾನೆಂದು ಸಿರಿನಲ್ಲಾ ರಕ್ಷಿಸೋ | ಎನ್ನವಗುಣಗಳ ಎಣಿಸದೆ ದಯದಿಂದ ಪ 


ನಿನ್ನ ಮೂರುತಿಯ ಬೆಳಗವದೋರಿಸಿ | ನಿನ್ನ ಪಾದಾಂಬುಜ ಪರಿಮಳ ಸುಳಿಸಿ | ನಿನ್ನ ನಾಮಾಮೃತ ಸವಿಸವಿ ಉಣಿಸಿ1 

ನಿನ್ನ ಪೂಜಿಸಿಕೊಂಡು ಕರಗಳಿಂದ | ಚೆನ್ನಾಗಿ ಪ್ರದಕ್ಷಿಣೆಯಾ ಪಾದಗಳಿಂದ | ಕಾಯ ನಮನದಿಂದ - ಎನ್ನ ಮನವಿಟ್ಟು ನಿನ್ನ ನೆನುವಿನಿಂದಾ2 

ಅನುದಿನ ಕೊಟ್ಟು ನಿನ್ನ ದಾಸರ ಸಂಗ | ಕೊನೆದೇಳದಿರಲೆನ್ನಾ ವಿಶ್ರಾಮದಂಗ | ನೀನಾಗಿರು ತುಂಬಿಯೆನ್ನಾ ಬಾಹ್ಯಾಂತರಂಗ | ಘನಗುರು ಮಹಿಪತಿ ಪ್ರಭುಶ್ರೀರಂಗ3

***


No comments:

Post a Comment