ankita ರಘುನಾಯಕ/ರಘುರಾಮ (ಅನೇಕ)
ರಾಗ: ಕಾಂಬೋಜಿ ತಾಳ: ಝಂಪೆ
ಒಲಿದು ಪಾಲಿಸಬೇಕು ನಿನ್ನ ನಂಬಿದ ನರನ ಪ
ಒಲಿಯದಿದ್ದರೆ ಯಾರ ಬೇಡಲಯ್ಯ ಅ. ಪ
ಕಾಲಕಾಲಕೆ ನಿನ್ನ ನಾಮ ಭಜನೆಯ ಮಾಡೆ
ಹಾಳುಮನ ಚಂಚಲದಿ ಕೈಬಿಡುತಿದೆ
ಏಳು ಬೇಗನೆ ಗುರುವೆ ನೀ ನೋಡದಿರಲೆನ್ನ
ಬಾಳು ಹಾಳಾಗುವುದು ಕರುಣದೊರೆಯೆ 1
ಮೊರೆಹೊಕ್ಕವರನೆಲ್ಲನುದ್ದರಿಸುವುದೆ ಕೃತಿಯು
ಹೊರಗಾದೆ ನಾನೊಬ್ಬ ನಿನ್ನ ದಯೆಗೆ
ಕರುಣಾಳು ನೀನೆಂಬ ಬಿರುದ ಹೋಗಾಡದಿರು
ಪೊರೆಯನ್ನ ಶೀಘ್ರದಲಿ ರಾಘವೇಂದ್ರ 2
ನೊಂದೆನೈ ಹಲವುಪರಿ ಇನ್ನಿದನು ತೊಲಗಿಸುತ
ತಂದೆ ನೀ ಭವ ವೈದ್ಯ ಸಲಹೆನ್ನನು
ಇಂದಿರಾರಮಣ ರಘುಪತಿಪಾದ ಸುಮಭೃಂಗ
ಬಂದು ಪಾಲಿಸು ದಯದಿ ತಡಮಾಡದೆ 3
***
No comments:
Post a Comment