Wednesday, 1 September 2021

ಯಥಾದೇವೊ ತಥಾ ಗುರೌ ಶ್ರುತಿ ಹೇಳಿದ ಸನ್ಮತಲಿರ್ಯೊ ankita mahipati

ಯಥಾದೇವೊ ತಥಾ ಗುರೌ ಶ್ರುತಿ ಹೇಳಿದ ಸನ್ಮತಲಿರ್ಯೊ ಪ  


ವೃಥಾ ಅಭಾವ ನೀ ಹಿಡುವರೆ ಸ್ವತ:ಸಿದ್ಧವ ತಾಂ ಬಿಡುವರೆ ಸತ್ಸಂಗದಲಿ ನೋಡಿನ್ನಾರೆ ಚಿತ್ಸುಖ ಹೊಳೆವರು ಕಣ್ಣಾರೆ 1 

ಮುಗಿಲಿಗೆ ಮತ್ತೆ ಮುಗಿಲುಂಟೆ ಹಗಲಿಗೆ ಹಗಲಾಗುದುಂಟೆ ಜಗ ಇಹುದಕೆ ಜಗಮುಂಟೆ ಹೀಗಾದ ಮ್ಯಾಲೆ ವಸ್ತು ಎರಡುಂಟೆ 2 

ಅನುಭವಕಿದರಿಟ್ಟು ಬಾಹುದು ಖೂನ ಹೇಳವ್ಯಾವು ನೋಡು ವೇದ ದೀನ ಮಹಿಪತಿಗಿದೆ ಬೋಧ ಭಾನುಕೋಟಿತೇಜನೊಂದೇ ತಾನಾದ 3

***

No comments:

Post a Comment