ಕಾಖಂಡಕಿ ಶ್ರೀ ಕೃಷ್ಣದಾಸರು
ಯದು ಕುಲಾಂಬುನಿಧಿ ಪೀಯೂಷಕ್ಷಕರ ಪಂಚಸಾಯಕಾನಂತ ಕಮನೀಯ ರೂಪಾ ಕಮಲಾಯತಾಕ್ಷನೆ ಬ್ರಹ್ಮ, ವಾಯು, ಸುರಮುನಿ ಮುಖ್ಯಧ್ಯೇಯ ವಿಷ್ಣೋ ಪ
ಗೋತ್ರಾರಿ ಪುತ್ರನಿಜಮಿತ್ರ ಸುಪವಿತ್ರ ಚಾ ಕಳತ್ರ ಶುಭಗಾತ್ರಗತಿ ಸತ್ರತ್ರಿನೇತ್ರನುತ ಸಕಲಜಗ ಸೂತ್ರ ನೋಟಕ ತೋತ್ರವೇತ್ರ ಪಾಣೆ 1
ಭವ ಭವ ಭಂಗ ವರಗೋಪಾಂಗನಾ ಅಂಗ ಸಂಗಲೀಲಾರತ ಭುಜಂಗ ಪರಿಯಂಕ ಸುರ ತುಂಗ ಗಂಗಾಜನಕ ಸರ್ವಾಂತರಂಗ ಹರಿ ಮಂಗಳಾತ್ಮಕ ತಿರುವೆಂಗಳೇಶಾ 2
ನಂದಕಂದ ಶ್ರೀ ಮುಕುಂದ ದುರಿತಾಂಧ ಅರ ವಿಂದಭಾಂಧವ ದಿತಿ- ಜವೃಂದ ವ್ಯಾಳಖಗೇಂದ್ರ ತಂದೆ ಮಹಿಪತಿ ನಂದನ ಪ್ರಿಯ ಗೋವಿಂದ ಆ ನಂದ ಕಂದನೆ ಸಿಂಧುಶಯನ ದೇವಾ3
***
No comments:
Post a Comment