Thursday, 25 February 2021

ಗುರುರಾಘವೇಂದ್ರ ನೀ ಕರುಣಿಸಿ ನೋಡಬಾರದೆ ankita raghunatha vittala

ಕಲ್ಲೂರು ತಮ್ಮಣ್ಣ ದಾಸರ ಕೃತಿ


 ಗುರುರಾಘವೇಂದ್ರ ನೀ ಕರುಣಿಸಿ ನೋಡಬಾರದೆ l 

ಮೊರೆ ಯಾರಿಗಿಡಲ್ಯೋ ನಾ ಕರುಣಾಶರಧೆ ll ಪ ll


ಸ್ಮರಿಸಿದವರ ಪೊರೆವೆನೆಂದು ನಿನ್ನ ಬಿರಿದೆ l

ವರ ಶರಣ ಕಲ್ಪತರುವೆ 

ಯೆನ್ನ ಯಾಕೆ ಮರದೆ ll ೧ ll


ಕರಮುಗಿದು ನಮಿಸಿ ನಿನಗೆ ಬಾಯಿ ತೆರೆದೆ ಇದು l

ಸರಿಯೆ ನಿನ್ನ ಮನಸು ಲೇಶವಾದರು ಮರುಗದೆ ll ೨ ll


ನಿರುತ ಎನ್ನ ಅವಗುಣಗಳನ್ನು ಮನಕೆ ತಾರದೆ ಬಂದು l

ಪೊರೆವ ರಘುನಾಥವಿಟ್ಠಲ ಕೃಪೆಯು ಬಾರದೆ ll ೩ ll

***

No comments:

Post a Comment