Thursday, 25 February 2021

ಚೆಲುವರಾಯನ ಕಂಡೆ ಸಿರಿದೇವಿ ankita mudduranga

 ರಾಗ - : ತಾಳ -


ಚೆಲುವ ರಾಯನ ಕಂಡೆ ಸಿರಿದೇವಿ ಅರಸನ ಕಂಡೆ l

ಜಲಜಲೋಚನ ರಾಮಚಂದ್ರನ್ನಾ ಕಂಡೆ ll ಪ ll


ಮಕರಕುಂಡಲಧರ ಮಂಗಳ ಮಹಿಮನ ಕಂಡೆ l

ಅಕಳಂಕ ಚರಿತ ನಿಗಮಗೋಚರನ ಕಂಡೆ l

ಭಕ್ತವತ್ಸಲನಾದ ಭವರೋಗದ್ವೈದ್ಯನ ಕಂಡೆ l 

ವಿಕಾಸಿತಾಬ್ಜನೇತ್ರ ವಿಜಯನ ಕಂಡೆ ll ೧ ll


ಶೇಷಶಯನನಾದ ಚಕ್ರಧರನ ಕಂಡೆ l

ಕೇಶವಾಚ್ಯುತ ವಾಸುದೇವನ್ನ ಕಂಡೆ l

ಭಾಷೆಪಾಲಿಪ ಭಕ್ತ ಚಿಂತಾಮಣಿಯಾ ಕಂಡೆ l

ಲೇಸಿನಿಂದಲಿ ಲಕ್ಷ್ಮೀನರಸಿಂಹನ ಕಂಡೆ ll ೨ ll


ಗಂಗೆಯ ಪಡದ ಕಾರುಣ್ಯಮೂರ್ತಿಯ ಕಂಡೆ l

ಶೃಂಗಾರವುಳ್ಳ ಶ್ರೀಹರಿಯ ಕಂಡೆ l

ಹಿಂಗದೆ ಪಾಲಿಪ ಮುದ್ದುರಂಗನ ಪಾದವ ಕಂಡೆ l

ಸಂಗ ಸುಖದಲೆನ್ನ ಸಲಹಿದದನೂ ಕಂಡೆ ll ೩ ll

**


No comments:

Post a Comment