Thursday, 25 February 2021

ಯಾಕೆ ದಯ ಬಾರದೊ ಶ್ರೀನಿವಾಸ ankita raghunatha vittala

 ರಾಗ - : ತಾಳ -



ಯಾಕೆ ದಯ ಬಾರದೋ l

ಯಾಕೆ ದಯ ಬಾರದೊ ಶ್ರೀನಿವಾಸ ನಿನಗೆ l

ಅನುದಿನ ನಿನ್ನ ಪದ ವನರುಹ ನೆನೆಯುವ l

ಘನ ದಾಸ ದಾಸ್ಯವ ಕೊಡುವದಕ್ಕಿನ್ನು l

ನಿನಗ್ಯಾಕೆ ದಯಬಾರದೊ ll ಪ ll


ನೀನು ಕುಣಿದರೆ ಕುಣಿಯುವೆ ಯನ್ನಾ ಸ್ವಾ l

ಧೀನವೆಲ್ಲಿಹವೈ ಲೇಶವಾದರು ದೇವಾ l

ಮಾನಾಭಿಮಾನ ಸರ್ವವು ನಿನಗರ್ಪಿಸಿ l

ಧ್ಯಾನವ ಮಾಡುವ ದೀನನ ಮ್ಯಾಲಿನ್ನು ll ೧ ll


ಧ್ರುವ ಗಜ ದ್ರೌಪದಿ ವಾದಿ ಅಜಾಮಿಳ l

ಇವರೆಲ್ಲ ನಿನಗುಪಕಾರ ಮಾಡಿದರೆಂತು l

ಕರಿರಾಯಗೆ ಭಕ್ತವತ್ಸಲನೆನ್ನಿಸಿ l

ಅವರಂತೆ ಅನುದಿನ ಪೊರೆಯಲು ಯನ್ನೊಳು ll ೨ ll


ಸಿಂಧುಶಯನ ಭವ ಬಂಧಮೋಚನ ಸುರ l

ವೃಂದವಿನುತ ರಘುನಾಥವಿಟ್ಠಲರೇಯ l

ಮಂದಮತಿಯು ನಾನು ಕುಂದುಗಳೆಣಿಸದೆ  l

ಬಂದು ಪಾಲಿಸು ಎಂದು ಬೇಡಿಕೊಳ್ಳುತಲಿರೆ ll ೩ ll

***


No comments:

Post a Comment