Thursday, 25 February 2021

ಕಡೆಗೋಲ ತಾರೆನ್ನ ಚಿನ್ನವೆ ಮೊಸ ರೊಡೆದರೆ ಬೆಣ್ಣೆ ankita srisrinivasa

ಶ್ರೀಮತಿ ಸರಸ್ವತೀಬಾಯಿಯವರ ಕೃತಿ


 ರಾಗ -  :  ತಾಳ - 


ಕಡೆಗೋಲ ತಾರೆನ್ನ ಚಿನ್ನವೆ ಮೊಸ

ರೊಡೆದರೆ ಬೆಣ್ಣೆ ಬಾರದೊ ಮುದ್ದು ಕೃಷ್ಣಯ್ಯ ll ಪ ll


ಅಣ್ಣ ಬಲರಾಮ ಚಿಣ್ಣರ ಸಹಿತಾಗಿ 

ಬೆಣ್ಣೆ ಹಣ್ಣನು ಮೆಲುವಿಯಂತೆ

ಯನ್ನಣ್ಣನೆ ಸಣ್ಣವನಾಗಿ ಎನ್ನೊಡನಾಟವೆ 

ಕಣ್ಣಿಗೆ ಕಾಡಿಗೆ ಇಡುವೆ ಬಾ ರಂಗಯ್ಯ ll ೧ ll


ಹಸುರಂಗಿ ಕೊಡಿಸುವೆ ಹಸುಳೆ ಬಾ ಕಂದನೆ 

ಹೊಸಪರಿಯಾಭರಣಗಳನಿಡುವೆ

ಹಸನಾದ ಹಸುವಿನ ತುಪ್ಪದ ದೋಸೆಯ

ಹಸುಳೆ ನಿನಗಾರೋಗಣೆಗೆ ಹೊತ್ತಾಯಿತೊ ll ೨ ll


ಪಡೆದ ಜನನಿಯಲ್ಲೆ ಎನ್ನೊಡೆಯ ಶ್ರೀ ಶ್ರೀನಿವಾಸ ನಿನ್ನ

ಕಡೆಹಾಯಿಸೊ ಕಡಗೋಲನಿ ತ್ತು ಎನ್ನ

ವಡನೆ ಪಿಡಿದು ಗೋಪಿ ಕಡುಮುದ್ದು ರಂಗನ 

ಬಿಡದೆತ್ತಿ ಮುದ್ದಿಸಿ ಸಡಗರದಿಂದಲಿ ll ೩ ll

***

No comments:

Post a Comment