Saturday, 27 February 2021

ವಿಟ್ಠಲಯ್ಯಾ ವಿಟ್ಠಲಯ್ಯಾ ಕಟಿ ಸಂಸ್ಥಿತಕರ ankita karivaradendra

 ವಿಟ್ಠಲಯ್ಯಾ ವಿಟ್ಠಲಯ್ಯಾ l


ಕಟಿ ಸಂಸ್ಥಿತಕರ l

ಧಿಟ ಶ್ರೀವರದೇಂದ್ರ ll ಪ ll


ಧ್ವಜ ವಜ್ರಾಂಕುಶ l

ದ್ವಿಜ ವರೂಥಿಹರಿ l

ಅಜನುತ ಪಾದಾಂ l

ಬುಜ ವರದೇಂದ್ರ ll ೧ ll


ಈಶ ವಾಸ್ಯ ಸ l

ರ್ವಾಸು ಜೀವನುತ l

ದಾಸ ವರ್ಗ ಸ l

ತ್ಪೋಶಿ ಸುವರದೇಂದ್ರ ll ೨ ll


ಮಂದರ ಧರ ಅರ l

ವಿಂದ ನಯನ ಹರಿ l

ಇಂದಿರೆ ಮಂದಿರ l

ಸುಂದರ ವರದೇಂದ್ರ ll ೩ ll


ಕರಜ ಧರಿಪ ನರ l

ಹರಿ ಧರಿಯಾಚಕ l

ದುರುಳಹ ರಘುಯದು l

ವರ ಸುಬುದ್ಧ ಕಲ್ಕಿ ll ೪ ll


ಶರಣರ ಪರಿಚರ l

ದುರುಳರ ಪರಿಹರ l

ಶ್ರೀಕರುಣಾಕರ l

ಕರಿ ವರದೇಂದ್ರ ll ೫ ll

***

No comments:

Post a Comment