Saturday, 27 February 2021

ನವರತ್ನದ ಮಂಟಪದಿ ಮೆರೆವೊ ಸುಖಾಸನಕೆ ankita srisrinivasaAA

 ಶ್ರೀಮತಿ ಸರಸ್ವತೀಬಾಯಿಯವರ ರಚನೆ

ರಾಗ -  :  ತಾಳ -


ನವರತ್ನದ ಮಂಟಪದಿ ಮೆರೆವೊ ಸುಖಾಸನಕೆ ಈಗ

ನವಮೋಹನ ರಘುರಾಮನೆ ನೀನು ಬಾ ಬೇಗ ll ಪ ll


ದಶರಥನುದರದಿ ಜನಿಸಿ ಅಸುರ ತಾಟಕಿಯನು ಸಂಹರಿಸಿ

ಋಷಿಗಳ್ಯಾಗವ ಕಾಯ್ದವ ನೀನು ಋಷಿ ಪತ್ನಿಯರನು ಉದ್ಧರಿಸೀ 

ಪತಿವ್ರತೆಯೆನಿಸಿದ ಅತುಳ ಮಹಿಮ ಶ್ರೀರಾಮ ಬಾ ಬೇಗ 

ಅತುಳ ಮಹಿಮ ಶ್ರೀರಾಮ ಬಾ ಬೇಗ ll ೧ ll


ಶಿವಧನುವೆತ್ತಿದ ಧೀರ ಸೀತಾದೇವಿಯ ಕರವನೆ ಪಿಡಿದಾ

ಜವದಿ ಪರಶುರಾಮನ ಗರ್ವವನು 

ತವಕದಿ ಮುರಿದಾಯೋಧ್ಯಯಾಳಿದ

ಶ್ರೀ ಶ್ರೀನಿವಾಸನೆ ನೀನು ಬಾ ಬೇಗ ಸುಖಾಸನಕೆ ll ೨ ll

***

No comments:

Post a Comment