ರಾಗ : ಹಂಸಧ್ವನಿ ಆದಿತಾಳ
Audio by Vidwan Sumukh Moudgalya
RESTART MOBILE IF AUDIO IS NOT PLAYING
CLICK-> INDEX ದೇವರನಾಮ ಕೇಳಿ ಕಲಿಯಲು ಲಿಂಕ್ LINKS TO LEARN DEVARANAMA
or just scroll down for other devaranama/ CLICK-> HOME
ಶ್ರೀ ಗೋಪಾಲದಾಸಾರ್ಯ ವಿರಚಿತ ಪ್ರಾಣದೇವರ ಕೃತಿ
ಎಂತು ತುತಿಸಲಿ ಎನ್ನ ದೈವತ
ಸಂತತಾ ನಮ್ಮ ಸಲಹುವಾನಾ
ಅಂತರಂಗದಿ ಹರಿಯ ತೋರಿಸಿ
ಸಂತೋಷದಿಂದ ನಲಿವ ಪವನನ ॥ಪ॥
ತಾನು ಮಾಡಿದ ಕರ್ಮಶೇಷವು
ತಾನು ತಿಳಿದ ಜ್ಞಾನಶೇಷವು
ತಾನು ಮಾಡಿದ ಭಕ್ತಿಶೇಷವು
ನಾನಾ ಸಾಧನಶೇಷವೂ
ತಾನೆ ಕರುಣಿಸಿ ಜೀವಯೋಗ್ಯತೆ
ಯಾನು ಅರಿತು ಕರ್ಮ ಮಾಡಿಸಿ
ತಾನು ಸಹಿತದಿ ಧ್ಯಾನದಲಿ ಹರಿ
ಕಾಣಿಸೀ ತೋರ್ಪ ಕರುಣಿಯ ॥೧॥
ಇವನ ಪ್ರೇರಣೆ ಹರಿಯ ಪ್ರೇರಣೆ
ಇವನ ಸೇವಿಯೆ ಹರಿಯಸೇವೆಯು
ಇವನ ಕರುಣವೆ ಹರಿಯ ಕರುಣವು
ಇವನ ಬಲವೆ ಪ್ರಬಲವೂ
ಇವನ ನಂಬಲು ಹರಿಯು ನಂಬಿದ
ಇವನು ಒಲಿಯಲು ಹರಿಯ ಒಲಿವ
ಇವನೆ ಮುಖ್ಯನಾಗಿ ನಮ್ಮನು
ಪವನಗತಿ ಪೊಂದಿಸುವರನಾ ॥೨॥
ಜ್ಞಾನ ಭಕುತಿ ವೈರಾಗ್ಯ ಖಣಿಯು
ದಾನವಾಂತಕ ಧರ್ಮಶೀಲಾ
ಪೂರ್ಣಬೋಧಯಾ ಪುಣ್ಯನಾಮಕ
ಪ್ರಾಣೋಪಾನ ಉದಾನರಿಗೆ
ಪ್ರಾಣ ಮುಖ್ಯಪ್ರಾಣದವ ನಮ್ಮ
ತ್ರಾಣ ಇಲ್ಲವು ಈತನು ಇಲ್ಲದಿರೆ
ಪ್ರಾಣಪತಿ ಗೋಪಾಲವಿಟ್ಠಲನ
ಕಾಣಿಸೀ ತೋರ್ಪ ಕರುಣೆಯ ॥೩॥
***
Pallavi
Entu tutisali enna daivata |
Santatā namma salahuvānā |
Antaraṅgadi hariya tōrisi |
Santōṣadinda naliva pavanana ||
Charana 1
Tānu māḍida karmaśēṣavu |
Tānu tiḷida jñānaśēṣavu |
Tānu māḍida bhaktiśēṣavu |
Nānā sādhananaśēṣavū |
Tāne karuṇisi jīvayōgyate |
Yānu aritu karma māḍisi |
Tānu sahitadi dhyānadali hari |
Kāṇisī tōrpa karuṇiya ||
Charana 2
Ivana prēraṇe hariya prēraṇe |
Ivana sēviye hariyasēveyu |
Ivana karuṇave hariya karuṇavu |
Ivana balave prabalavū |
Ivana nambalu hariyu nambida |
Ivanu oliyalu hariya oliva |
Ivane mukhyanāgi nammanu |
Pavanagati pondisuvaranā ||
Charana 3
Jñāna bhakuti vairāgya khaṇiyu |
Dānavāntaka dharmaśīlā |
Pūrṇabōdhayā puṇyanāmakā |
Prāṇōpāna udānarige |
Prāṇa mukhyaprāṇadava namma |
Trāṇa illavu ītanu illadire |
Prāṇapati gōpālavithṭhalana |
Kāṇisī tōrpa karuṇeya ||
***
Pronunciation Guide (Simplified)
Retroflex Sounds (ḍ, ḷ, ṇ, ṣ, ṭ): Curl your tongue tip back to touch the roof of the mouth.
Aspirated Consonants (dh, bh, gh, kh, ph): Add a soft puff of air after the letter.
Vowel Length (ā, ī, ū, ē, ō): Hold these sounds for twice the duration of short vowels.
'Ś' Sound: Pronounce 'ś' like the 'sh' in "shoe".
Rhythmic Flow: Maintain a steady pace, holding the final syllables of each line slightly longer to keep the musical rhythm.
***
ಶ್ರೀ ಗೋಪಾಲದಾಸರು ಪ್ರಾಣದೇವರ ಮಹಿಮೆಯನ್ನು ಕೊಂಡಾಡಿರುವ ಈ ಸುಂದರ ಕೀರ್ತನೆಯ ಸಾರಾಂಶ ಮತ್ತು ಅರ್ಥ ಇಲ್ಲಿದೆ.
Summary (Kannada)
ಈ ಕೀರ್ತನೆಯಲ್ಲಿ ಗೋಪಾಲದಾಸರು ವಾಯುದೇವನ (ಪ್ರಾಣದೇವರು) ಅನಂತ ಕರುಣೆಯನ್ನು ವರ್ಣಿಸಿದ್ದಾರೆ. ಪ್ರಾಣದೇವರು ಹರಿಯ ಪರಮ ಭಕ್ತರಾಗಿದ್ದು, ಜೀವರಿಗೆ ಯೋಗ್ಯತಾನುಸಾರ ಕರ್ಮಗಳನ್ನು ಮಾಡಿಸಿ, ಅಂತರಂಗದಲ್ಲಿ ಹರಿಯನ್ನು ತೋರಿಸಿ, ಭಕ್ತರನ್ನು ಕರುಣೆಯಿಂದ ಸಲಹುವ 'ಹರಿ-ಗುರು'ಗಳ ನಡುವಿನ ಸೇತುವೆಯಾಗಿದ್ದಾರೆ ಎಂದು ದಾಸರು ಸ್ತುತಿಸಿದ್ದಾರೆ.
Padyada Artha (Kannada)
ಪಲ್ಲವಿ:
ಎಂತು ತುತಿಸಲಿ ಎನ್ನ ದೈವತ | ಸಂತತಾ ನಮ್ಮ ಸಲಹುವಾನಾ | ಅಂತರಂಗದಿ ಹರಿಯ ತೋರಿಸಿ | ಸಂತೋಷದಿಂದ ನಲಿವ ಪವನನ ||
ಅರ್ಥ: ನಮ್ಮ ದೈವವಾದ ಪ್ರಾಣದೇವರನ್ನು ಹೇಗೆ ಸ್ತುತಿಸಲಿ? ಸದಾ ನಮ್ಮನ್ನು ಸಲಹುತ್ತಾ, ಅಂತರಂಗದಲ್ಲಿ ಹರಿಯ ದರ್ಶನ ಮಾಡಿಸಿ ನಮ್ಮನ್ನು ಆನಂದಿಸುವ ಪವನನ (ವಾಯುದೇವರ) ಮಹಿಮೆ ಅಪಾರ.
ಚರಣ 1:
ತಾನು ಮಾಡಿದ ಕರ್ಮಶೇಷವು | ತಾನು ತಿಳಿದ ಜ್ಞಾನಶೇಷವು | ತಾನು ಮಾಡಿದ ಭಕ್ತಿಶೇಷವು | ನಾನಾ ಸಾಧನಶೇಷವೂ | ತಾನೆ ಕರುಣಿಸಿ ಜೀವಯೋಗ್ಯತೆ | ಯಾನು ಅರಿತು ಕರ್ಮ ಮಾಡಿಸಿ | ತಾನು ಸಹಿತದಿ ಧ್ಯಾನದಲಿ ಹರಿ | ಕಾಣಿಸೀ ತೋರ್ಪ ಕರುಣಿಯ ||
ಅರ್ಥ: ಪ್ರಾಣದೇವರು ಕರ್ಮ, ಜ್ಞಾನ, ಭಕ್ತಿ ಮತ್ತು ಸಾಧನೆಗಳ ಸಾರವನ್ನು ಅರಿತವರು. ಜೀವಗಳ ಯೋಗ್ಯತೆಗೆ ತಕ್ಕಂತೆ ಕರ್ಮಗಳನ್ನು ಮಾಡಿಸಿ, ತಾವೂ ಧ್ಯಾನದಲ್ಲಿ ಹರಿಯನ್ನು ಕಾಣುತ್ತಾ ನಮಗೂ ಆ ದರ್ಶನ ಮಾಡಿಸುವ ಕರುಣಾಮಯಿ.
ಚರಣ 2:
ಇವನ ಪ್ರೇರಣೆ ಹರಿಯ ಪ್ರೇರಣೆ | ಇವನ ಸೇವಿಯೆ ಹರಿಯಸೇವೆಯು | ಇವನ ಕರುಣವೆ ಹರಿಯ ಕರುಣವು | ಇವನ ಬಲವೆ ಪ್ರಬಲವೂ | ಇವನ ನಂಬಲು ಹರಿಯು ನಂಬಿದ | ಇವನು ಒಲಿಯಲು ಹರಿಯ ಒಲಿವ | ಇವನೆ ಮುಖ್ಯನಾಗಿ ನಮ್ಮನು | ಪವನಗತಿ ಪೊಂದಿಸುವರನಾ ||
ಅರ್ಥ: ಪ್ರಾಣದೇವರ ಪ್ರೇರಣೆಯೇ ಹರಿಯ ಪ್ರೇರಣೆ. ಅವರನ್ನು ಸೇವಿಸುವುದು ಎಂದರೆ ಹರಿಯನ್ನು ಸೇವಿಸಿದಂತೆ. ಅವರ ಕರುಣೆ ಸಿಕ್ಕರೆ ಹರಿಯ ಕರುಣೆ ಸಿಕ್ಕಂತೆ. ಅವರು ಒಲಿದರೆ ಹರಿಯೂ ಒಲಿಯುತ್ತಾನೆ. ಇವರೇ ಮುಖ್ಯಪ್ರಾಣರಾಗಿ ನಮ್ಮನ್ನು ಮುಕ್ತಿಯ ಪಥದಲ್ಲಿ ನಡೆಸುತ್ತಾರೆ.
ಚರಣ 3:
ಜ್ಞಾನ ಭಕುತಿ ವೈರಾಗ್ಯ ಖಣಿಯು | ದಾನವಾಂತಕ ಧರ್ಮಶೀಲಾ | ಪೂರ್ಣಬೋಧಯಾ ಪುಣ್ಯನಾಮಕ | ಪ್ರಾಣೋಪಾನ ಉದಾನರಿಗೆ | ಪ್ರಾಣ ಮುಖ್ಯಪ್ರಾಣದವ ನಮ್ಮ | ತ್ರಾಣ ಇಲ್ಲವು ಈತನು ಇಲ್ಲದಿರೆ | ಪ್ರಾಣಪತಿ ಗೋಪಾಲವಿಟ್ಠಲನ | ಕಾಣಿಸೀ ತೋರ್ಪ ಕರುಣೆಯ ||
ಅರ್ಥ: ಜ್ಞಾನ, ಭಕ್ತಿ, ವೈರಾಗ್ಯಗಳ ಗಣಿಯೇ ನೀವು. ರಾಕ್ಷಸರ ಸಂಹಾರಕ ಮತ್ತು ಧರ್ಮಶೀಲರು. ನೀವು ನಮ್ಮ ಪ್ರಾಣಕ್ಕೆ ಆಧಾರ. ನೀವು ಇಲ್ಲದಿದ್ದರೆ ನಮಗೆ ಶಕ್ತಿಯೇ ಇಲ್ಲ. ಗೋಪಾಲ ವಿಠಲನ ದರ್ಶನ ಮಾಡಿಸುವ ಕರುಣಾಳು ನೀವು.
***
Summary
In this Kirtana, Gopaladasaru glorifies the infinite grace of Vayu (Pranadevaru). He describes Vayu as the bridge between the Lord and the devotees, who guides living beings according to their spiritual merit, inspires them to perform righteous actions, and reveals Lord Hari within their hearts. Gopaladasaru emphasizes that worshipping and pleasing Vayu is equivalent to worshipping and pleasing Lord Hari, as Vayu is the chief instrument of the Lord's grace.
Pallavi
Entu tutisali enna daivata |
Santata namma salahuvana |
Antarangadi hariya torisi |
Santoshadinda naliva pavanana ||
Meaning: How shall I praise my deity? He who constantly protects us, who reveals Hari within our hearts, and who rejoices in our happiness—the Wind God (Vayu).
Stanza 1
Tanu madida karmasheshavu |
Tanu tilida jnanasheshavu |
Tanu madida bhaktisheshavu |
Nana sadhanasheshavu |
Tane karunisi jivayogyate |
Yanu aritu karma madisi |
Tanu sahitadi dhyanadali hari |
Kanasii torpa karuniya ||
Meaning: He who knows the essence of all karma, jnana, bhakti, and spiritual practice; who understands the capacity of each soul, guides our actions accordingly, and reveals Hari in meditation, is indeed the compassionate one.
Stanza 2
Ivana prerane hariya prerane |
Ivana seviye hariyaseveyu |
Ivana karunave hariya karunavu |
Ivana balave prabalavu |
Ivana nambalu hariyu nambida |
Ivanu oliyalu hariya oliva |
Ivane mukhyanagi nammanu |
Pavanagati pondisuvarana ||
Meaning: His inspiration is the inspiration of Hari; serving him is serving Hari; his grace is Hari’s grace. If one believes in him, Hari believes in them; if he is pleased, Hari is pleased. He is the Chief Prana who leads us to salvation.
Stanza 3
Jnana bhakuti vairagya khaniyu |
Danavantaka dharmashila |
Purnabodhaya punyanamaka |
Pranopana udanarige |
Prana mukhyapranadava namma |
Trana illavu itanu illadire |
Pranapati gopalaviththalana |
Kanasii torpa karuneya ||
Meaning: You are a mine of knowledge, devotion, and detachment; the destroyer of demons and the embodiment of dharma. You are our strength, for without you, we have no power. O Pranadevaru, please grant me the grace to see Lord Gopalavithala.
***
Entu tutisali ennadevana santata namma salahona
Antarangadi hariya torisi santoshadinda naliva pavanana ||pa||
Tanu madida karmaseshavu tanu tiluhida j~janaseshavu
Tanu madida bakutiseshavu nana sadhanaseshavu
Tanu karunisi jivayogyateyenu aritu karmamadisi
Tanu sahita dhyanadali hari kanisi torpa karuneya ||1||
Ivana prerane hariya prerane ivana seveyu hariya seveyu
Ivana karunave hariya karunavu ivana balave prabalavu
Ivanu nambalu hariyu nambuva ivanu oliyalu hariyu oliyuva
Pavanakyanagi nammanu pavanagati pondisuvana ||2||
J~janabakuti vairagyakaniyu danavantaka dharmasila
Purnabodheya punyanamaka pranapanavudanarige
Prana mukyaprana iva namma prananilladu ivanu illadire
Pranapati gopalavithalana kanisi torpa karuneya ||3||
***
ರಾಗ : ಭೈರವಿ ತಾಳ : ಖಂಢಛಾಪು
ಎಂತು ತುತಿಸಲಿ ಎನ್ನದೇವನ ಸಂತತ ನಮ್ಮ ಸಲಹೋನ
ಅಂತರಂಗದಿ ಹರಿಯ ತೋರಿಸಿ ಸಂತೋಷದಿಂದ ನಲಿವ ಪವನನ ।।ಪ।।
ತಾನು ಮಾಡಿದ ಕರ್ಮಶೇಷವು ತಾನು ತಿಳುಹಿದ ಜ್ಞಾನಶೇಷವು
ತಾನು ಮಾಡಿದ ಭಕುತಿಶೇಷವು ನಾನಾ ಸಾಧನಶೇಷವು
ತಾನು ಕರುಣಿಸಿ ಜೀವಯೋಗ್ಯತೆಯೇನು ಅರಿತು ಕರ್ಮಮಾಡಿಸಿ
ತಾನು ಸಹಿತ ಧ್ಯಾನದಲಿ ಹರಿ ಕಾಣಿಸಿ ತೋರ್ಪ ಕರುಣೆಯ ।।೧।।
ಇವನ ಪ್ರೇರಣೆ ಹರಿಯ ಪ್ರೇರಣೆ ಇವನ ಸೇವೆಯು ಹರಿಯ ಸೇವೆಯು
ಇವನ ಕರುಣವೆ ಹರಿಯ ಕರುಣವು ಇವನ ಬಲವೇ ಪ್ರಬಲವು
ಇವನು ನಂಬಲು ಹರಿಯು ನಂಬುವ ಇವನು ಒಲಿಯಲು ಹರಿಯು ಒಲಿಯುವ
ಪವನಾಖ್ಯನಾಗಿ ನಮ್ಮನು ಪವನಗತಿ ಪೊಂದಿಸುವನ ।।೨।।
ಜ್ಞಾನಭಕುತಿ ವೈರಾಗ್ಯಖಣಿಯು ದಾನವಾಂತಕ ಧರ್ಮಶೀಲ
ಪೂರ್ಣಬೋಧೆಯ ಪುಣ್ಯನಾಮಕ ಪ್ರಾಣಾಪಾಣವುದಾನರಿಗೆ
ಪ್ರಾಣ ಮುಖ್ಯಪ್ರಾಣ ಇವ ನಮ್ಮ ಪ್ರಾಣನಿಲ್ಲದು ಇವನು ಇಲ್ಲದಿರೆ
ಪ್ರಾಣಪತಿ ಗೋಪಲವಿಠಲನ ಕಾಣಿಸಿ ತೋರ್ಪ ಕರುಣೆಯ ।।೩।।
**********
No comments:
Post a Comment