Sunday, 10 November 2019

ಕಂಗಳು ಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ ankita pranesha vittala

by ಪ್ರಸನ್ನವೆಂಕಟದಾಸರು
ಕಂಗಳು ಹಿಂಗದಿರಲಿ ಎನ್ನ ನಿನ್ನಮಂಗಳಾಂಘ್ರಿ ಸರೋಜಂಗಳಲ್ಲಿ ಕೃಷ್ಣ ಪ.

ಕ್ಷಿತಿಯನಳೆದ ಋಷಿಸತಿಯರಘ ಕಳೆದಶ್ರುತಿಸಾರಸ್ತುತಿಗೊಮ್ಮೆಗತಿ ಗೂಢದೊಲಿದಯತಿ ಮುನಿಜನ ದೇವತತಿಗಳ ಮನದಿಪ್ರತಿಕ್ಷಣ ತಟಿತದೀಧಿತಿಯುಳ್ಳ ಪದದಿ 1

ಜಗದಘಹರಿಯೆಂಬ ಮಗಳನು ಪಡೆದಮಿಗಿಲಾದ ಕ್ರತುಕರ್ತನಿಗೆ ಒತ್ತಿ ಪೊರೆದಖಗವರಾದನ ಕರಯುಗಳೊಳು ಮೆರೆದವಿಗಡಾಹಿ ಮೌಳಿಯೋಳ್ ಧಿಗಿಲೆಂಬ ಪದದಿ 2

ಶ್ರೀ ಚಕ್ಷುಚಕೋರ ಪೂರ್ಣಚಂದ್ರ ನಖದನೀಚಹಿಕೇತುವ ನಾಚಿಸಲೆಸೆದಶ್ರೀಚೆನ್ನ ಪ್ರಸನ್ವೆಂಕಟಾಚಲದೊಳಿದ್ದೆನ್ನಾಚರಣೆಗಕ್ಷಯ ಸೂಚಿಪ ಪದದಿ 3
********

No comments:

Post a Comment