Sunday 10 November 2019

ಕಕ್ಷಾ ದೇವತೆಗಳ ಮನನ ಪ್ರಾಣ ಪಾಲೀಸಿಂದ್ರಾನ ankita pranesha vittala

by ಪ್ರಾಣೇಶದಾಸರು
ಕಕ್ಷಾದೇವತೆಗಳ ಮನನ ಪ್ರಾಣ ಪಾಲೀಸಿಂದ್ರಾನ ರಾಣೀ ದಕ್ಷಾನಿರುದ್ಧಾ |ಮಾನಿನಿರತಿಮನುಗುರುವಾಯು ಕೋಲೆ ||ಮಾನಿನಿರತಿಮನುಗುರುವಾಯು ಯಮಸೋಮ|ಮಾನವಿ ಭಾಸ್ಕರಗೆರಗೂವೆ ಕೋಲೆ 1

ವರುಣ ನಾರದವಹ್ನಿತರುಣಿ ಪ್ರಸೂತಿ ಭೃಗು |ಸರಸೀಜಾಸನನ ಪುತ್ರರಾರೊಂದು ಕೋಲೆ ||ಸರಸೀಜಾಸನನ ಪುತ್ರರಾರೊಂದು ಮಂದಿಗಳ |ವರನಾಮ ವಿಸ್ತರಿಸಿ ವಂದಿಪೆ ಕೋಲೆ 2

ಅಂಗೀರಾ ಪುಲಸ್ತ್ಯ ಅತ್ರಿ ಮಂಗಳಾಂಗ ಪುಲಹ ಕೃತು |ತುಂಗವಶಿಷ್ಠಿ ಮರೀಚಿಗೊಂದಿಪೆ ಕೋಲೆ ||ತುಂಗವಶಿಷ್ಠ ಮರೀಚಿ ವಿಶ್ವಾಮಿತ್ರನಿಗೆ ಮತ್ಸ್ಯಾ |ನಂಗ ಕಂಡ ವೈವಸ್ವತಗೊಂದಿಸುವೆ ಕೋಲೆ3

ನಿರರುತಿ ಪ್ರಾವಾಹಿಮಿತ್ರಗುರುಪತ್ನೀಗೆ ವಂದಿಸುವೆ |ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಕೋಲೆ ||ಕರಿಮುಖ ವಿಶ್ವಕ್ಸೇನ ಪೌಲಸ್ತ್ಯ ಅಶ್ವಿನೀಗ |ಳಿರಳೂ ಹಗಲೂ ನಾ ಸ್ಮರಿಸೂವೆ ಕೋಲೆ 4

ಮರುತೂ ನಾಲ್ವತ್ತೊಂಬತ್ತುಗುರುವಿಶ್ವೇದೇವ ಹತ್ತು |ಎರಡು ಅಶ್ವೀನೀ ರುದ್ರರ್ಹನ್ನೊಂದೂ ಕೊಲೆ ||ಎರಡು ಅಶ್ವೀನೀ ರುದ್ರರ್ಹನ್ನೊಂದೂ ವಸುಯಂಟು |ಎರಡಾರು ಸೂರ್ಯರಿಗೆರಗೂವೆ ಕೋಲೆ 5

ಭಾರತೀ ಭರತಾಗೆ ಮೂರು ಪಿತೃಗಳಿಗೆ |ಧಾರೂಣೀ ಋಭುವೀಗೆರಗುವೆ ಕೋಲೆ ||ಧಾರೂಣೀ ಋಭುವೀಗೆರಗೂವೆ ತಿಳೀವದು |ನೂರು ಮಂದೆಂದೂ ಕರಸೋರು ಕೋಲೆ 6

ಮೂರು ಮಂದೀ ಉಳಿದೂ ಈರೈದು ಒಂದು ಮನು |ಚಾರುನಾಮಗಳ ವರ್ಣೀಪೆ ಕೋಲೆ ||ಚಾರುನಾಮಗಳ ವರ್ಣೀಪೆ ದಯಮಾಡಿ |ಸೂರಿಗಳೆಲ್ಲಾ ಕೇಳ್ವೋದು ಕೋಲೆ 7

ಸ್ವಾರೋಚೀಷೋತ್ತುಮಾನು ಶ್ರೀ ರೈವತ ಚಾಕ್ಷುಷಾ |ನಾರಾಯಣನ ದಾಸ ಸಾವರ್ಣಿ ದಕ್ಷಾ ಕೋಲೆ ||ನಾರಾಯಣನ ದಾಸ ಸಾವರ್ಣಿ ದಕ್ಷ ಬ್ರಹ್ಮ |ಮಾರಾರಿದೇವ ಧರ್ಮ ಇಂದ್ರ ಸಾವರ್ಣೀ ಕೋಲೆ 8

ಎಂದಿವರೀಗೊಂದೀಸಿ ಮುಂದೆ ಚವನ ಋಷಿ |ನಂದಾನೋಚಿತ್ಥ್ಯ, ಪಾವಕಾ, ಧೃವ, ನಹುಷ ಕೋಲೆ ||ನಂದಾನೋಚಿತ್ಥ್ಯಪಾವಕಧೃವನಹುಷಶಶಿ|ಬಿಂದೂ ಪ್ರಹ್ಲಾದ ಪ್ರಿಯ ವೃತಗೊಂದಿಸುವೆ ಕೋಲೆ9

ಶಾಮಲಾ ಗಂಗಾ ಉಷಾ ಸೋಮರಾಣಿ ಸಂಜ್ಞಾ |ಧೀಮಂತ ಪರ್ಜನ್ಯಾಖ್ಯ ಸೂರ್ಯಗೆ ಕೋಲೆ ||ಧೀಮಂತ ಪರ್ಜನ್ಯಾಖ್ಯ ಸೂರ್ಯಗೆ ವಂದಿಸೀ ಅನ |ಭೀ ಮಾನೀ ಸೂರರನ್ನ ಮನದೊಳು ನೆನವೆನೆ ಕೋಲೆ 10

ಅನಲರಸೀಬುಧಅಶ್ವಿನಿ ಭಾರ್ಯಾ ಛಾಯಾ ಪುತ್ರ |ಶನಿ ಪುಷ್ಕರಜಾನೂಜ ದೇವತಿಗಳಿಗೆ ಕೋಲೆ ||ಶನಿ ಪುಷ್ಕರಜಾನೂಜ ಮನ ದೇವತೆಗಳಿಗೊಂದಿಪೆ ಸು |ಪ್ರಾಣೇಶ ವಿಠಲಾನಲ್ಲಿರಲೆಂದು ಕೋಲೆ 11

ಉರುವಸೀ ಮುಖ್ಯ ಅಪ್ಸರ ಸ್ತ್ರೀಯರೀಗೊಂದಿಸೀ |ಹರಿನಾರಿಯರ ಪಾದಕ್ಕೆರಗೂವೆ ಕೋಲೆ ||ಹರಿನಾರಿಯರ ಪಾದಕ್ಕೆರಗಿ ಪಿತೃಗಂಧರ್ವ |ನರನಾರಪತಿಮನುಷ್ಯೋತ್ತಮರಿಗೊಂದಿಸುವೆ ಕೋಲೆ12

ಈ ನಿರ್ಜರರ ಧ್ಯಾನವನ್ನು ಮಾಡುತ್ತಾ |ಪ್ರಾಣೇಶ ವಿಠಲನ ಆ ನಾಭಿಯಿಂದ ||ಪ್ರಾಣೇಶ ವಿಠಲನ ಆ ನಾಭಿಯಿಂದ ಬಂದ |ಜ್ಞಾನಿಗಳ ಸಂತತೀ ನಾ ವರ್ಣಿಸುವೆ ಕೋಲೆ 13
*******

No comments:

Post a Comment