Sunday, 10 November 2019

ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ankita govinda

by ಗೋವಿಂದದಾಸ
ಕಂಡೀರೆ ನೀವೆಲ್ಲರೂ ಶ್ರೀಕೃಷ್ಣನ ಕಂಡೀರೆ ಪ

ಕಂಡೀರೆ ಪಾಂಡುರಂಗನನೂ ಕಳಕೊಂಡಿರೆಪಾಪ ಸರ್ವವನೂ ಅಂಡಜವಾಹನನಾಗಿಸಂಚರಿಸುವಪುಂಡರೀಕಾಕ್ಷಬ್ರಹ್ಮಾಂಡ ನಾಯಕನನ್ನೂ 1

ಎಂಟನೆ ಅವತಾರಿಯೆನಿಸಿ ದೇವಕಿ ಎಂಟನೇಗರ್ಭದಿ ಜನಿಸಿ ಎಂಟನೆಮಾಸಶ್ರಾವಣಕೃಷ್ಣಾಷ್ಟಮಿ ದಿನ ನಟ್ಟಿರುಳಿನಲಿಸೃಷ್ಟಿಗಿಳಿದ ಶ್ರೀಕೃಷ್ಣನ 2

ಮಧುರಾ ಪಟ್ಟಣದಿ ಮೈದೋರಿ ಬಹುವಿಧವಾಗಿ ಗೋಕುಲದೊಳಗಾದಧಿಘೃತಚೋರಕನೆಂದು ಯಶೋದೆಗೆಪದುಮಾಕ್ಷಿಯರು ಬಂದು ದೂರುವ ಕೃಷ್ಣನ 3

ದನುಜೆ ಪೂತನೆಯಸುಗೊಂಡು ತನ್ನಜನನಿಗೋಪಿಗೆ ಬಾಯೊಳ್ ತೋರ್ದ ಬ್ರಹ್ಮಾಂಡವನಜಾಕ್ಷಿಯರ ಕೂಡಿ ಯಮುನಾ ತೀರದೊಳಾಡಿವನಿತೆಯರುಡುವ ಶೀರೆಗಳೊಯ್ದ ಕೃಷ್ಣನೇ 4

ಗೋವಳರರಸನೆಂದೆನಿಸಿ ಶಿರಿಗೋವರ್ಧನವೆತ್ತಿಗೋವ್ಗಳ ಮೇಸಿ ಪಾವಕನುಕಾಳಿಮರ್ದನ ಗೈದು ಮಾವ ಕಂಸನ ಗೆಲ್ದಮಧುರೆಯೊಳ್ ಕೃಷ್ಣನಾ 5

ದ್ವಾರಕಾಪುರವೊಂದ ರಚಿಸಿ ಬಲವೀರರಾಮನ ದೊರೆರಾಯನೆಂದೆನಿಸಿನಾರಿಯರ್ ಹದಿನಾರು ಸಾವಿರ ವಡಗೂಡಿಮಾರಕೇಳಿಯೊಳ್ ಮುದ್ದು ತೋರುವ ಕೃಷ್ಣನ 6

ಶರದ ಸೇತುವಿಗೆ ಮೈಯ್ಯಾಂತ ಉಟ್ಟಶೆರಗೀಗೆ ವರವ ದ್ರೌಪದಿಗೊಲಿದಿತ್ತನರನ ಸಾರಥಿಯಾಗಿ ಕುರುನೃಪರನು ಗೆಲ್ದುಧರೆಯ ಪಟ್ಟವ ಧರ್ಮಜನಿಗಿತ್ತ ಕೃಷ್ಣನೆ 7

ದುಷ್ಟ ನಿಗ್ರಹನೆಂಬ ಬಿರುದೂ ಭಕ್ತರಕ್ಷಕನೆಂದು ಮೂರ್ಲೋಕವದೆಂದೂಸೃಷ್ಟಿಯೊಳ್ ನರಜನರು ನಮಿಸಿ ಪೂಜಿಸಲೆಂದುಬಿಟ್ಟರು ದ್ವಾರಕಾಪುರವ ರಾಮಕೃಷ್ಣರು 8

ಹಡಗಿನ ಮೇಲೇರಿ ಬಂದೂ ನಮ್ಮಉಡುಪಿಅನಂತೇಶನಿದಿರಾಗಿ ನಿಂದೂಕಡು ಕೃಪೆಯೊಳ್ ಭಕ್ತ ಕನಕನಿಗೊಲಿದವೊಡೆಯ ಗೊೀವಿಂದ ಗೋಪಾಲಕೃಷ್ಣನ 9
*******

No comments:

Post a Comment