ಪ್ರಾಣಿ ದಿನ ಮೋಸಗಳೆಯಬ್ಯಾಡ ಪ
ವಂದಿಸದೆ ಸಾಧು ಸಜ್ಜನರ ಶ್ರೀಪಾದವನು ಬರುದೆ ಶೋಧವಿಯ ನೀ ಮಾಡಬ್ಯಾಡ ಅರಿಯದ ಧಮರಸಂಗ ಕೂಡಬ್ಯಾಡ ಪರನಿಂದೆ ದೂಷಣೆಯ ಮಾಡಬ್ಯಾಡ ಗುರುಹಿರಿಯರ ಮಾತು ಮೀರಬ್ಯಾಡ 1
ಏನೆಂದು ತಿಳಿಯದೆ ಜ್ಞಾನಿಗಳ ಮಹಿಮೆಯನು ಅಜ್ಞಾನತನದಲಿ ಉಳಬ್ಯಾಡ ಹೀನ ಗುಣದಲಿ ನೀ ಬಾಳಬ್ಯಾಡ ಅನ್ಯಾಯತನವೆ ನೀ ಕೇಳಬ್ಯಾಡ ನಿನ್ನ ಸ್ತುತಿ ನೀನೆವೆ ಹೇಳಬ್ಯಾಡ 2
ನಿನ್ನೊಳು ನಿನ್ನ ಸ್ಥಿತಿಗಳನು ತಿಳಿಯದೆ ಕುಂದ ನೀ ನೋಡಬ್ಯಾಡ ನಾನೆ ದೊಡ್ಡವನೆಂದು ಆಡಬ್ಯಾಡ ಮಹಿಪತಿ ನೀ ದಗಿಯ ಬೀಳಬ್ಯಾಡ ಗುರು ಆಜ್ಞೆಯಿಂದ ಕಡಿಗ್ಯಾಗಬ್ಯಾಡ ಪ್ರಾಣಿ 3
*****
No comments:
Post a Comment