Wednesday, 1 September 2021

ಮಾತು ಸವಿಯೋ ಅವರ ಮಾತು ಸವಿಯೋ ಮಾತಿಲಾತ್ಮಾನುಭವದ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಮಾತು ಸವಿಯೋ ಅವರ ಮಾತು ಸವಿಯೋ ಮಾತಿಲಾತ್ಮಾನುಭವದ ಸ್ಥಿತಿಯಗೂಡಿಸುವರ ಪ  


ನಿತ್ಯಾನಿತ್ಯದಿತ್ಯರ್ಥದ ತತ್ವಾರ್ಥಸಾರಾಯ ಬೀರಿ ಸತ್ಯ ಸನಾತನದ ಸುಪಥವಗೂಡಿಸುವರ 1 

ಚಿತ್ತ ಶುದ್ದವನೆ ಮಾಡಿ ಮತ್ತವಾದ ಪರಬ್ರಹ್ಮಯ ಎತ್ತ ನೋಡಿದರತ್ತ ಪ್ರತ್ಯಕ್ಷ ತೋರಿಸುವರ 2 

ಸ್ವಾನುಭವಾಮೃತವನು ಙÁ್ಞನಾಂಜನದುಲುಣಿಸಿ ತಾನೆ ತಾನಾದ ದೀನ ಮಹಿಪತಿ ಸ್ವಾಮಿಯ 3

***


No comments:

Post a Comment