Wednesday, 1 September 2021

ಆವ ಸೇವೆಯಿಂದ ನಿನ್ನುತ್ತೀರ್ಣಾಗುವರೋ ಭೋಕ್ತ ಗುರು ಮಹಿಪತಿ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಆವ ಸೇವೆಯಿಂದ ನಿನ್ನುತ್ತೀರ್ಣಾಗುವರೋ | ಭೋಕ್ತ ಗುರು ಮಹಿಪತಿ ನಿಮ್ಮ ಶರಣರು ಪ 

ಒಡಲೊಳಗಿದ್ದ ಶಿಶು ಹೊರಗ ಬಂದ ಮ್ಯಾಲ ಒಡ ಮೂಡುವದು ನೋಡಿ ಜನನಿ ಮೋಹಾ ಪೊಡವಿಯೊಳಿಹನ ಕರೆದೊಡಲೋಳಿಟ್ಟುಕೊಂಡು ಕುಡಿಸಿ ಬೋಧಾಮೃತವ ಸಲಹುವ ಗುರುಮಾತಾ 1 
ಸತಿಯಲಿ ವೀರ್ಯವನಿಟ್ಟು ಬೆಳಸಿ ಘನ ಯುತನಾದರಾಗ ತಂದೆಯ ಮೋಹವು ಕ್ಷಿತಿಯೊಳು ನಿಜವೀರ್ಯ ಕಳಿಯದೆ ಮೂಢ ಭಕ್ತಿರಿಗೊಲಿದು ಬೀರುವ ದಯ ಗುರು ತಂದೆ 2 
ತನುವ ನಿರ್ಮಿಸಲು ತಾ ತನುವಿನೊಡೆಯ ನೀನು ಮನವ ನೀಡಲು ಚೇತನಾತ್ಮ ನೀನು ಧನವ ನೀಡಲು ಇಹ ಪರವೀವ ಧೊರಿ ನೀನು ನೆನೆವರ ಶ್ರಯಧೇಯ ಕಾಯೋ ನಂದನ ಪ್ರಭು3
***


No comments:

Post a Comment