Wednesday, 1 September 2021

ದಾಸನಾನೆಂಬೇ ಗುರು ಭಕುತರಾ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು


ದಾಸ ನಾನೆಂಬೇ ಗುರು ಭಕುತರಾ ಪ 


ಗುರುವೇ ಜನಕ ಘನ ಗುರುವೇ ಜನನಿಯ | ಗುರುವೇ ಗೆಳೆಯ ನಿಜ ಗುರುವೇ ಆತ್ಮನು | ಗುರುವೇ ಬಂಧುವು ಗುರುವೇ ಇಷ್ಟನು | ಗುರುವೇ ಗತಿಮತಿ ಗುರುವೆಂದವರಾ 1 

ಗುರುವೇ ಚತುರ್ಮುಖ ಗುರು ಕಮಲಾಂಬಕ | ಗುರುವೇ ಸದಾಶಿವ ಗುರುವೇ ಸಂತರು | ಗುರುವೇ ಸುರಭಿಯ ಗುರು ಚಿಂತಾಮಣಿ | ಗುರು ಧನದ್ರವ್ಯನು ಗುರುವೆಂದವರಾ 2 

ಗುರು ವಚನವೇ ಶೃತಿ ಗುರುದಯ ಮುಕ್ತಿಯು | ಗುರು ಗೃಹ ಕ್ಷೇತ್ರವು ಗುರು ನೋಟ ಪರಸವು | ಗುರು ಸ್ಮರಣೆಯೇ ಜಪ ಗುರು ಮಹಿಪತಿ ಪ್ರಭು | ಗುರು ಭಕ್ತಿಯೇ ತಪ ಗುರುವೆಂದವರಾ 3

***


No comments:

Post a Comment