ಕೇಶವಾದಿ ನಾರಾಯಣಗೆ ಆರುತಿ
ಆರುತಿ ಬೆಳಗಿರೆ ಕೇಶವ ಮೂರ್ತಿಗೆ ಪಾರಾಯಣ ಮಾಡಿ ನಾರಾಯಣಗೆ
ಕೀರುತಿ ಪೊಗಳುತ ಮಾಧವಗೆ ಆನಂದದಿ ಮಾಡೆ ಗೋವಿಂದಗೆ||ಪಲ್ಲ||
ಕಷ್ಟಗಳ ಕಳೆಯೆಂದು ವಿಷ್ಣುವಿಗೆ ಮೋದದಿಂದ ಮಧುಸೂದನಗೆ
ಚಕ್ರಧರನು ತ್ರಿವಿಕ್ರಮಗೆ ಪಾವನ ಮೂರುತಿ ವಾಮನಗೆ||೧||
ಆದರದಲಿ ಮಾಡೆ ಶ್ರೀಧರಗೆ ದೋಷ ಕಳೆವ ಹೃಷಿಕೇಶನಿಗೆ
ಹೃತ್ಪದ್ಮದಲ್ಲಿರುವ ಪದ್ಮನಾಭನಿಗೆಆಮೋದದಿ ಮಾಡೆ ದಾಮೋದರಗೆ||೨||
ಶಂಕರರಿಂದೊಂದಿತ ಸಂಕರುಷಣಗೆ ಲೇಸುಮಾಡುವ ವಾಸುದೇವನಿಗೆ
ವಿದ್ಯ ಬುಧ್ಧಿ ನೀಡೊ ಪ್ರದ್ಯುಮ್ನನಿಗೆ ಧೇನುಪಾಲಕ ಅನಿರುಧ್ಧನಿಗೆ||೩|||
ಹರುಷದಿಂದ ಪುರುಷೋತ್ತಮಗೆ ಪಾದಕೊಂದಿಸಿ ಅದೋಕ್ಷಜಗೆ
ಪಾರುಗಾಣಿಪ ನಾರಸಿಂಹಗೆ ಚ್ಯುತಿಯಿಲ್ಲದೆ ನಮ್ಮ ಅಚ್ಯತಗೆ||೪||
ಧನದಾಸೆಯಿಲ್ಲದೆ ಜನಾರ್ಧನಗೆ ಸಂಪ್ರೀತಿಯಿಂದ ಉಪೇಂದ್ರನಿಗೆ
ಲೀಲೆಯಿಂದಲಿ ಶ್ರೀ ಹರಿಗೆಉಧ್ಧರಿಪ ಕೃಷ್ಣ ಮಧ್ವೇಶಕೃಷ್ಣಗೆ||೫||
*********
No comments:
Post a Comment