Saturday 1 May 2021

ವಾಸುಕೀಶಯನವಿಠ್ಥಲ ಸಲಹೋ ankita muddu mohana vittala vasukishayana vittala dasa stutih

" ಶ್ರೀ ಮುದ್ದುಮೋಹನವಿಠ್ಠಲರು ಶ್ರೀ ಗುಂಡೂರಾವ್ ಅವರಿಗೆ ನೀಡಿದ ಅಂಕಿತ ನಾಮ" - " ಶ್ರೀ ವಾಸುಕೀಶಯನವಿಠ್ಠಲ " 

ರಾಗ : ಕಾಂಬೋಧಿ ತಾಳ : ಝಂಪೆ 


ವಾಸುಕೀಶಯನವಿಠ್ಥಲ 

ಸಲಹೋ ।। ಪಲ್ಲವಿ ।। 


ದೋಷರಾಶಿಯ ಕಳೆದು 

ಪೋಷಿಸುವುದು ನಿರುತ ।। ಅ. ಪ ।। 


ಪರಮಮಂಗಳ ನಿನ್ನ 

ಚರಿತೆಯನು ತೋರಿಸಿ ।

ಕರಕರೆಯ ಬಿಡಿಸುವುದು 

ಕರುಣಾನಿಧೆ ।

ಸರಿಗಾಣೆನೋ ನಿನ್ನ 

ಸ್ಮರಣೆ ಮಾತ್ರವ ಕೊಟ್ಟು ।

ಕರ ಪಿಡಿದು ಕಾಯುವುದು 

ಸುರಮುನಿ ವಂದ್ಯ ।। ಚರಣ ।। 


ಪ್ರಾಣಪತಿಯೇ ಇವನ 

ಸ್ಥಾಣು ಮಾರ್ಗವ ಬಿಡಿಸಿ ।

ಕಾಣಿಸೂವಂತೆ 

ನೀನು ಕರುಣಿಸುವುದೂ ।

ವಾಣಿ ಅರಸನ ಪಿತನೆ 

ಗೇಣುದರ ಚಿಂತೆಯ ।

ಜಾಣತನದಲಿ ಬಿಡಿಸೋ 

ಪೂರ್ಣಪ್ರಜ್ಞಾತ್ಮ ।। ಚರಣ ।। 


ತಾರತಮ್ಯ ಜ್ಞಾನ ಬಾರಿ 

ಬಾರಿಗೂ ತಿಳಿಸಿ । ಉ ।

ದ್ಧಾರ ಮಾಡುವುದು ನೀನು 

ವಾರಿಜಾಕ್ಷ ।

ದೂರ ನೋಡದೆ ಇವರ

ಪಾರುಗಾಣಿಸಿ ನೀನು ।

ಭೂರಮಣ ಮುದ್ದು-

ಮೋಹನವಿಠ್ಠಲ ಸಲಹೋ ।। ಚರಣ ।।

****

No comments:

Post a Comment