Wednesday 1 September 2021

ಜಯ ಜಯ ಯಾಧವನಾಥ ಮುರಾರಿ ಜಯ ಜಯ ಶ್ರೀವಧು ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಜಯ ಜಯ ಯಾಧವನಾಥ ಮುರಾರಿ ಜಯ ಜಯ ಶ್ರೀವಧುರಮಣ ಶ್ರೀ ಹರಿ ಪ 


ದೀನೊದ್ದರ ಸಗಟಾಸುರದಮನಾ ಆನಂದ ಮೂರುತಿ ಫಣಿವರ ಶಯನಾ 1 

ಕರುಣಾ ಕರಗಿರಿಧರ ಸರ್ವೇಶಾ ಶರಣಾಗತ ವತ್ಸಲ ಪಯೋನಿಧಿವಾಸಾ 2 

ಕಂಬುಕಂದರ ಕಮಲಳಾಕ್ಷಾ ಅಂಬುಜ ಭವನುತಗೋಗೋರಕ್ಷಾ 3 

ಶಂಬರ ಮಥನ ಜನಕ ಮಹಾ ಮಹಿಮಾ ಜಂಭಭೇದಿಸುತ ಸಖಘನ ಶಾಮಾ 4 

ಪೀತಾಂಬರಧರ ಕೃಷ್ಣ ಶ್ರೀಧರಾ ಮಾತುಳನಾಶನ ಕೃತಭೂಧರಾ 5 

ಗುರುಮಹಿಪತಿ ಸುತ ಜೀವನರಾಮಾ ಪರಮಾನಂದ ಕಾಯಕ ಗುಣಧಾಮಾ 6

***


No comments:

Post a Comment