Monday, 2 August 2021

ರಮೆಯರಸ ರಕ್ಷಿಸೋ ನಮಿತಜನರ ಕಲ್ಪದ್ರುಮ ಸುಮನೋಹರ ankita uragadrivasa vittala

ರಮೆಯರಸ ರಕ್ಷಿಸೋ

ನಮಿತಜನರ ಕಲ್ಪದ್ರುಮ ಸುಮನೋಹರ ಪ


ಅಮಿತ ಸುಗುಣ ಪೂರ್ಣ-ಶಮಲವರ್ಜಿತ ಹೃ-

ತ್ಕಮಲ ದ್ಯುಮಣಿ ನಿಸ್ಸೀಮಮಹಿಮ ಸಂಪೂರ್ಣಕಾಮ ಹರಿ1


ಸೃಷ್ಟಿಗೊಡೆಯ ಪರಮೇಷ್ಟಿಜನಕ ನಿನ್ನಿಷ್ಟರ ಅಘ ಸಂ-

ಕಷ್ಟಹರಿಸಿ ಸಂತುಷ್ಟಿಯನೀವ ನಿರ್ದುಷ್ಟಫಲಪ್ರದ 2


ಉರಗಾದ್ರಿವಾಸವಿಠಲ ದೇವ ಹರೇ ಕರೆ ನಿನ್ನ ಬಳಿ

ಸಿರಿ ವೆಂಕಟೇಶನೆ ದೊರೆ-ಪೊರೆ ನಿನ್ನ್ಹೊರತು ನಾನರಿಯೆ 3

****


No comments:

Post a Comment