Monday, 6 September 2021

ಮಂದನ ಮೊರೆಗೆ ಮಂತ್ರಮಂದಿರ ಶ್ರೀ ರಾಘವೇಂದ್ರ ankita lakumeesha

 ankita ಲಕುಮೀಶ 

ರಾಗ: [ರೇವಗುಪ್ತಿ] ತಾಳ: [ಆದಿ]


ಮಂದನ ಮೊರೆಗೆ ಮಂತ್ರಮಂದಿರ ಶ್ರೀ ರಾಘ-

ವೇಂದ್ರ ನೀ ಓಡ್ಯೋಡಿ ಬಂದು ರಕ್ಷಿಸಯ್ಯಾ 


ಹಿಂದೆ ತಂದೆಯ ನಾನಾ ಅಪರಾಧ ಒಂದೂ ಎಣಿಸದೆ ಮೋಕ್ಷಕೊಡಿಸಿದೆ

ಎಂದು ಕೇಳಿದೆ ದೀನಜನಬಂಧುವೆಂದು ನಂಬಿ ವಂದಿಪೆ  ಅ ಪ

ಮಲಿನಜನರ ಸೇರಿ ಕೆಟ್ಟೆ ವರ್ಣಾಶ್ರಮ ಧರ್ಮ ತಿಳಿದಾಚರಿಸದೆ ಬಿಟ್ಟೆ 

ಹಲವು ನಾನಾ ಬಗೆಯ ರೋಗದ ಸುಳಿಯ ಶೂಲದ ಬಲೆಗೆ ಒಳಗಾದೆ

ಇಳಿಯೊಳಿನ್ನ ಕರುಣಿಗಳ ಕಾಣೆ ಛಲವು ತೋರದೆ ಒಲಿದು ದಯದಲಿ  1

ಚೂತರಸದಿ ಬಿದ್ದ ಶಿಶುವು ಅಸುನೀಗಲಾಕ್ಷಣ ಮಾತರಿಶ್ವನಮಂತ್ರವ

ಖ್ಯಾತ ಜಪಿಸಿ ಅವನ ಉಳುಹಿದೆ ಭೀತಳಾದ ಪ್ರಸೂತಿ ಕಾಯ್ದವ

ಪ್ರಾರ್ಥಿಸೆ ಭೂನಾಥಜಾತೆಗೆ ನೀತಮಹಿಮನೆ ಪ್ರಾಣದಾತನೆ  2

ಪ್ರಹ್ಲಾದ ಗುರುರಾಜಾ ಅವತರಿಸಿ ಬಂದೆ ಬಾಹ್ಲೀಕ ವ್ಯಾಸರಾಜಾ

ಚೆಲ್ವ ನ್ಯಾಯಾಮೃತವ ಮತ್ತೆ ಒಳ್ಳೆ ಚಂದ್ರಿಕಾ ತರ್ಕತಾಂಡವ

ಮಲ್ಲ ರಚಿಸಿದ ರಾಘವೇಂದ್ರನೆ ಕಳ್ಳ ಶ್ರೀಲಕುಮೀಶನೂಲಿಸಿದ  3

***


No comments:

Post a Comment