Monday, 6 September 2021

ಮಂತ್ರ ಮಂದಿರೇಶನ ಸಂತರ ಒಡೆಯನ ನೋಡಮ್ಮ ankita lakumeesha

 ankita ಲಕುಮೀಶ 

ರಾಗ: [ಮೋಹನ] ತಾಳ: [ಆದಿ]


ಮಂತ್ರಮಂದಿರೇಶನ ಸಂತರ ಒಡೆಯನ ನೋಡಮ್ಮ

ನೋಡೆ ಈತನ ಪಾಡಮ್ಮ ಪಾಡೆ


ಕಂತುಪಿತನ ಪದಚಿಂತನೆ ನೀಡಿ ದು- 

ಶ್ಚಿಂತೆ ಕಳೆದು ನಿಶ್ಚಿಂತಮಾಡುವ  ಅ.ಪ


ಬಂಗಾರ ಕಶ್ಯಪಗೆ ಸುತನು ಹಿಂದಕೆ ಈತನು 

ರಂಗನ ಪದಪದ್ಮ ಭೃಂಗನಾದವನು

ಸಂತತ ಇವನು ಪಿಂಗಳಕೋಟಿನಿಭಾಂಗನ ಸ್ತಂಭದಿ

ಹಿಂಗದೆ ಜನಕನ ಕಂಗಳಿಗೆ ತೋರಿದ  1

ಗುರವೀಗೆ ಗುರುವೆನಿಸುತ್ತಾ ಧರೆಯೋಳ್ ಪುಟ್ಟುತ್ತ

ಧರಣೀಪನಘ ತರಿಯುತ್ತ ಚಂದ್ರಿಕೆ ರಚಿಸುತ್ತಾ

ಸಿರಿವ್ಯಾಸರಾಜ ಉರಗಾರಿಧ್ವಜನ 

ಕರುಣಾಬ್ಧಿಜ ಕಲ್ಪತರುವೆನಿಸಿ ಮೆರೆವಾ  2

ವೇಂಕಟೇಶನ ವರದಿಂದ ತಿಮ್ಮಣ್ಣಭಟ್ಟರ ಕಂದ

ವೇಂಕಟೇಶನೆನಸಿ ಸುಧೀಂದ್ರಕರಜಾತನಾದ ರಾಘವೇಂದ್ರ

ಪಂಕಜೋದ್ಭವ ಕರ ಪಂಕಜಾರ್ಚಿತ ಮೂಲ

ಪಂಕಜಾಕ್ಷನ ಪದಪಂಕಜ ಭಜಿಸಿದ  3

ಕ್ಷಿತಿತಸ್ಕರಾರಿಜ ತಟದಿ ನಿಂತೀಪ ಬೃಂದಾವನದಿ ನತಭಕ್ತ

ಸ್ತುತಿಗೆ ಹಿತದಿ ಮಿತಿಮೀರಿ ವರವೀವ ಮುದದಿ ಚತುರೇಕ

ಮೂರ್ತಿಯ ಚತುರತನದಿ ಸ್ತುತಿಪ ಮತಿಯನೆ ಕೊಟ್ಟು ಸ-

ದ್ಗತಿಯನೆ ತೋರುವ  4

ಮೂಕಾಂಧವಂಧ್ಯರಿಗೀತ ಮಾತು ಕಣ್ಣು ಸುತರ ಕೊಡುವಾತ 

ನಾಕಾಣೆ ಮಹೀಮಗೆಣೆಮಾತ ಭೀಕರ ಭವಜಲದಿ ಪೋತ 

ಪಾಕಶಾಸನ ತಮ್ಮ ಲಕುಮೀಶದೇವನೆ ನಾಕ್ಹತ್ತು 

ಲೋಕಪತಿ ಏಕದೈವವೆಂದು ಪೇಳ್ದ  5

*** 


No comments:

Post a Comment