ankita ಲಕುಮೀಶ
ರಾಗ: [ಕೇದಾರಗೌಳ] ತಾಳ: [ಆದಿ]
ರಥವೇರಿ ಬಂದಾ ನೋಡೆ ಶ್ರೀ ರಾಘವೇಂದ್ರನು ಪ
ರಥವೇರಿ ಭಕುತರ ಜಿತಸ್ತುತಿಗೊಲಿದು ಸುಗತಿಯಗೋಸುಗ
ಮಾಪತಿಯ ಧ್ಯಾನವಿತ್ತು ಪತಿತ ಕುಚ್ಛಿತವಾದಿ ಅತಿತತಿ ಗೆಲ್ಲುತ ಅ.ಪ
ಪೂರ್ವಾದಿ ಈತನು ಮಾತೃಗರ್ಭದಿ ಇದ್ದು
ನಾರಾಯಣ ಶ್ರೀಮಂತ್ರ ನಾರಾದರಿಂದ ತಿಳಿದೂ
ಮಾರಜನಕನಂಘ್ರಿ ಸಾರಿ ಸ್ತುತಿಸಿ ದಯಾವಾರಿಧಿ
ಈಜುತ ಘೋರ ರಕ್ಕಸ ಪಿತಗೇ ನಾರಸಿಂಹನನು
ತೋರುತ ಸ್ತಂಭದಿ ಬಾರಿಬಾರಿಗೆ ತನ್ನನ್ನಾರಾಧಿಪರ
ಮೀರಿದ ಅಘಮರ ಬೇರ ಕೀಳಿ ಭಯ ದೂರಗೈದು
ಹರಿ ವಾರಿಜನಾಭನ ತೋರಲು ಪ್ರಹ್ಲಾದ 1
ಯದುರಾಜ ಕೃಷ್ಣನ ಮುದದಿಂದ ಭಜಿಸಲು
ಮುದಮುನಿಮತ ನೀರಧಿಗೆ ಶಶೀಎನಿಸೀ
ಬುಧ ಬ್ರಹ್ಮಣ್ಯಯತಿ ಪದುಮಾಕರೋದ್ಭವ
ವಿಧಿಕುಲಕುಮುದಕೆ ಸದಮಲ ಹರುಷ ಕೊಡುತಾ
ಅಧಮ ಕುಹಕಮತ ಕದಳಿವನಕೆ ಈತ ಮದಗಜನೆನಿಸುತ
ವಿಧಿಸುತನಂಶಗೆ ಅಬ್ಧಿಶಯ್ಯನ ತೋರಿ ನದಿಪಿತ
ಪದಪದ್ಮ ಮಧುಪ ವ್ಯಾಸರಾಜ 2
ಈ ಮಹಾಮಹಿಮ ಮತ್ತೆ ಸ್ವಾಮಿ ಗುರುರಾಘವೇಂದ್ರನ
ನಾಮಾದಿ ಮೆರೆದು ಮೂಲರಾಮಾದೇವಾನ ಅರ್ಚಿಸಿ
ಶ್ರೀಮತ್ ಸುಧಾ ಸುಮದ ಕಾಮಿತ ಪರಿಮಳವ
ತಾ ಮಂದಮಾರುತನಂತೆ ಭೂಮಿಸುರರಿಗೆ ಬೀರುತಾ
ಶ್ರೀಮಂತ್ರಗೃಹಪಾದ ಕಾಮಧೇನುವೆನಿಸಿ ಪ್ರೇಮದಿ ತನ್ನನು
ನೇಮದಿ ಭಜಿಸುವ ಪಾಮರರನು ಉದ್ಧಾರಗೈದು ಬಲು
ಕಾಮಿತವೀಯುತ ಸಾಮಜಪಾಲ ಲಕುಮೀಶನ ಸ್ತುತಿಸುತ 3
***
No comments:
Post a Comment