Thursday, 7 November 2019

ಆರೆನ್ನ ಉಳುಹುವರೈ ರಂಗ ankita prasannavenkata

by ಪ್ರಸನ್ನವೆಂಕಟದಾಸರು
ಆರೆನ್ನ ಉಳುಹುವರೈ ರಂಗ
ಘೋರಾರಣ್ಯ ಭವದಿ ಸಿಕ್ಕಿದೆ ರಂಗ ಪ.

ಎಂಟು ಕಾಡಾನೆ ಎಂಟು ಕಡೆಯಲಿ 
ನಿಂತಿವೆಗಂಟನಿಕ್ಕಿವೆ ಮೂರು ದಳ್ಳುರಿಯ
ಸುಂಟರಗಾಳ್ಯೆಬ್ಬರಿಸಲು ಗಿಡಗಂಟಿಲಿ 
ಬಿದ್ದೆ ನೀನಲ್ಲದೆನ್ನ 1

ಹುಲಿಯೊಂದು ಗುಡುಗುಡಿಸುತಿದೆ 
ಭಯಂಕರಬಲು ತೋಳೆರಡು 
ಕೆಕ್ಕರಿಸುತಿವೆಸಲುಗೆಯ ಕೋತಿಯೊಂದಣ
ಕಾಡುತಲಿದೆಮೇಲೆ ಕರಡಿಯು ಹತ್ತೆಳವುತಿದೆ 2

ಕಾಳುರಗನ ಕಟ್ಟು ಮೈತುಂಬ ನನ್ನ
ನಾಲಿಗೇಳದು ನಿನ್ನ ಕರೆಯಲಿಕೆ ನಿನ್ನಾಳಟ್ಟಿ 
ಕರೆಸಿಕೊಳ್ಳೆಲೆ ತಂದೆ ನಾಗೋಳಿಟ್ಟೆ 
ಪ್ರಸನ್ನವೆಂಕಟ ಬಂಧು 3
******

No comments:

Post a Comment