ಕಾಖಂಡಕಿ ಶ್ರೀ ಮಹಿಪತಿರಾಯರು
ಕರುಣಾ ಸಾಗರ ಬಿರುದ ತರಣೋಪಾಯದೋರುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 1
ತ್ವರಿತ ಪುಣ್ಯಗೈಸುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 2
ಹರುಷನಾಗಿ ಸೂಸುದ ಗುರುತವಾಗಿ ಭಾಸುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 3
ಅರಹುಪೂರ್ಣನೀಡುವ ಕುರುಹುಮಾಡಿ ಕೂಡುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 4
ಹರಿಯ ತಂದುಗುಡುದ ಸಿರಿಯ ಸೌಖ್ಯಲಿಡುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 5
ಸಾರಸೇವಿಸುವದ ಗುರುಪಾದಾರವಿಂದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 6
ಬೆರೆದು ಘನಗೂಡುದ ಹರುಷ ಮಹಿಪತಿಗ್ಯಾಗುದ ಸ್ಮರಿಸೊ ಮನವೆ ಸದಾ ಶ್ರೀಗುರುನಾಮಗೊಂಬುದ 7
***
No comments:
Post a Comment